ಮಂಗಳೂರು: ಮಂಗಳೂರಿನ ಗೋರಿಗುಡ್ಡದ ಕಿಟೆಲ್ ಮೆಮೊರಿಯಲ್ ಅನುದಾನಿತ ಪ್ರೌಢಶಾಲೆಯಲ್ಲಿ ಸುದೀರ್ಘ 39 ವರ್ಷಗಳ ಕಾಲ ನಿರಂತರವಾಗಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಶ್ರೀಕೃಷ್ಣ ಎನ್ ಅವರು 2023-24ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಸ್ಥೆಯ ಸರ್ವ ಉನ್ನತಿಗೆ ಮತ್ತು ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ಬೆಳಕಾಗಿ, ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿ, ತನು-ಮನದ ಹೃದಯ ಶ್ರೀಮಂತಿಕೆಯುಳ್ಳ ನಗುಮೊಗದ ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿರುವ ಅವರು, ಎಸ್.ಎಸ್.ಎಲ್. ಸಿ ವಿಜ್ಞಾನ ವಿಷಯ ಮೌಲ್ಯಮಾಪನ ಕೇಂದ್ರದಲ್ಲಿ ಆನೇಕ ಮಹತ್ತರ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಳೆದ 5 ವರ್ಷಗಳಿಂದ ಜಂಟಿ ಮುಖ್ಯ ಮೌಲ್ಯಮಾಪಕರಾಗಿ ಯಶಸ್ವಿ ಸೇವೆಯನ್ನು ಸಲ್ಲಿಸಿದ ಕೀರ್ತಿ ಅವರದ್ದು. ಈ ಸಂದರ್ಭದಲ್ಲಿ ತಮಗೆ ದ.ಕ ಜಿಲ್ಲೆಯ ಸಮಸ್ತ ವಿಜ್ಞಾನ ಶಿಕ್ಷಕರು ಶ್ರೀಕೃಷ್ಣ ನೀರಮೂಲೆ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ