ಕಡಲತೀರದ ಸ್ವಚ್ಚತೆಗೆ ಪ್ರವಾಸಿಗರ ಸಹಕಾರ ಅಗತ್ಯ: ಡಾ. ಚೂಂತಾರು

Upayuktha
0


ಮಂಗಳೂರು: ಮಂಗಳೂರಿನಲ್ಲಿ ಹಲವಾರು ಸುಂದರ ರಮಣೀಯ ಕಡಲ ತೀರಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡಲು ಬರುತ್ತಿದ್ದಾರೆ. ಆದರೆ ಮೋಜು ಮಸ್ತಿ ಮಾಡಿದ ಬಳಿಕ ಕಡಲ ತೀರದ ಸ್ವಚ್ಚತೆಗೂ ಅವರು ಗಮನ ಹರಿಸುವುದು ಅತೀ ಅಗತ್ಯ. ಕಡಲ ತೀರವನ್ನು ಸ್ಚಚ್ಚಗೊಳಿಸುವುದು ಜಿಲ್ಲಾಡಳಿತದ ಮತ್ತು ಪ್ರವಾಸೋದ್ಯಮ ಇಲಾಖೆಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ಪ್ರವಾಸಿಗರೂ ತಮ್ಮ ಹೊಣೆ ಅರಿತು ಕಡಲ ತೀರವನ್ನು ಸ್ಚಚ್ಚಗೊಳಿಸಲು ಸಹಕರಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲ್, ಕಸ ಕಡ್ಡಿಗಳನ್ನು ಹಾಕುವುದರಿಂದ ಪರಿಸರ ನಾಶದ ಜೊತೆಗೆ ಸಮುದ್ರದಾಳದ ಜಲಚರಗಳಿಗೂ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಹೆಚ್ಚು ಜವಾಬ್ದಾರಿ ವಹಿಸುವುದು ಅತೀ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಕರೆ ನೀಡಿದರು. 


ಭಾನುವಾರದಂದು (ಸೆ.3) ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡದ ಸುರತ್ಕಲ್  ಘಟಕದ ವತಿಯಿಂದ ಸುರತ್ಕಲ್ ಎನ್.ಐ.ಟಿ.ಕೆ ಸುರತ್ಕಲ್ ಕಡಲ ತೀರದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಬೆಳಿಗ್ಗೆ 7 ರಿಂದ 9 ರವರೆಗೆ ಕಡಲ ತೀರವನ್ನು ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಹಿರಿಯ ಗೃಹ ರಕ್ಷಕರಾದ ಸುರೇಶ್, ಯಮನೂರ, ಆನಂದ್, ದಿವಾಕರ, ಸಂದೇಶ, ಶ್ರೀಮತಿ ಸರಿತಾ, ಮನೋರಮಾ, ಸಾವಿತ್ರಿ ಹಾಗೂ ಇತರ ಗೃಹರಕ್ಷಕ ಗೃಹರಕ್ಷಕಿಯರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top