ಉಡುಪಿ: ಶ್ರೀಕೃಷ್ಣಮಠದಲ್ಲಿ,ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರೊಂದಿಗೆ ತುಳಸಿ ಸನ್ನಿಧಿಯಲ್ಲಿ ಅರ್ಘ್ಯಪ್ರಧಾನ ಮಾಡಿದರು.
ಶ್ರೀಕೃಷ್ಣಮಠದಲ್ಲಿ, ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ದೇವರ ನೈವೇದ್ಯಕ್ಕಾಗಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಉಂಡೆಯನ್ನು ತಯಾರಿಸಲು ಚಾಲನೆ ನೀಡಿದರು.
ಶ್ರೀಕೃಷ್ಣಮಠದಲ್ಲಿ,ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ, ರಥಬೀದಿಯಲ್ಲಿ ಮೊಸರು ಕುಡಿಕೆಯ ಗುರ್ಜಿ ಮಹಾತ್ಮಾ ಗಾಂಧಿಯ ವೇಷ ಗಮನ ಸೆಳೆಯಿತು.
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ, ಶ್ರೀಕೃಷ್ಣಜಯಂತೀ ಅಂಗವಾಗಿ, ಡಾ.ಭವ್ಯಶ್ರೀ ಕಿದಿಯೂರು ಅವರ ಪ್ರಾಯೋಜಕತ್ವದಲ್ಲಿ ಜಗದೀಶ್ ಪುತ್ತೂರ್ ಇವರಿಂದ 'ಭಕ್ತಿ ಗಾನ ಮಂಜರಿ' ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,ಭುವನೇಂದ್ರ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು. ನಂತರ 'ಗಾನ ಮಂಜರಿ' ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ