ಕರ್ತವ್ಯ ಸಲ್ಲಿಸಿದ್ದರಲ್ಲಿ ತೃಪ್ತಿಯಿದೆ: ನವೀನ್‌ ಭಂಡಾರಿ

Upayuktha
0

             ಕಡಬ ತಾಲೂಕು ಪಂಚಾಯತ್‌ ನಲ್ಲಿ ಬೀಳ್ಕೊಡುಗೆ ಸಮಾರಂಭ



ಕಡಬ: ನೂತನ ಕಡಬ ತಾಲೂಕು ಪಂಚಾಯತ್‌ ರಚನೆಯಾಗಿ ಪ್ರಭಾರವಾಗಿ ಸರಕಾರ ತನ್ನನ್ನು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಲಭ್ಯವಾಯಿತು. ಈ ಸಂದರ್ಭ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು ಆದರೆ ಅದನ್ನೆಲ್ಲ ಸರಿದೂಗಿಸಿಕೊಂಡು ಕರ್ತವ್ಯ ಸಲ್ಲಿಸಿದ್ದರಲ್ಲಿ ತೃಪ್ತಿಯಿದೆ ಎಂದು ಕಡಬ ತಾ.ಪಂ.ನ ನಿಕಟಪೂರ್ವ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ಅಭಿಪ್ರಾಯಪಟ್ಟರು.


ಅವರು ಸೆ.5 ರಂದು ಕಡಬ ತಾ.ಪಂ. ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.


2020 ರಿಂದ 2023ರ ಆಗಸ್ಟ್‌ ತಿಂಗಳ ವರೆಗೆ ಸುಮಾರು 3 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದೇನೆ. ಯಾವ ರೀತಿ ಗ್ರಾಮೀಣಾಭಿವೃದ್ಧಿಗೆ ಎಲ್ಲಾ ಗ್ರಾ.ಪಂ.ಗಳ ಅಧಿಕಾರಿಗಳು, ಸಿಬ್ಬಂದಿಗಳು ನನಗೆ ಸಹಕಾರವನ್ನು ನೀಡಿದ್ದೀರೋ ಅದೇ ರೀತಿ ಇದೀಗ ಸರಕಾರ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಲು ಕಾರ್ಯನಿರ್ವಾಹಕ ಅಧಿಕಾರಯವರನ್ನೂ ನೇಮಿಸಿದ್ದಾರೆ, ಅವರಿಗೂ ಪೂರ್ಣ ಸಹಕಾರವನ್ನು ನೀಡಬೇಕೆಂದು ಆಶಿಸಿದರು.


ಗೌರವಾರ್ಪಣೆ

ಕಡಬ ತಾಲೂಕಿನ ವರ್ಷಗಳ ಕಾಲ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ನವೀನ್‌ ಕುಮಾರ್‌ ಭಂಡಾರಿ ಅವರಿಗೆ ಹಾಗೂ ನೆಲ್ಯಾಡಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾಗಿದ್ದು ಇದೀಗ ವರ್ಗಾವಣೆಗೊಂಡ ಮಂಜುಳಾ ಅವರನ್ನು ತಾ.ಪಂ. ಪರವಾಗಿ, ತಾಲೂಕು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಸಂಘದಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖಾ ನೌಕಕರ ಸಂಘದ ವತಿಯಿಂದ, ಕಾರ್ಯದರ್ಶಿಗಳು, ಲೆಕ್ಕಸಹಾಯಕರಿಂದ, ನರೇಗಾ ಸಿಬ್ಬಂದಿಗಳಿಂದ, ಗ್ರಾ.ಪಂ. ಸಿಬ್ಬಂದಿಗಳ ಸಂಘದಿಂದ ಗೌರವಿಸಲಾಯಿತು.


ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರು ಮಾತನಾಡಿ, ದೂರದೂರಿಂದ ಇಲ್ಲಿ ಬಂದು ಕೆಲಸ ಮಾಡಲು ಕಷ್ಟ ಆಗಬಹುದೆಂದುಕೊಂಡಿದ್ದೆ, ಆದರೆ ಕಡಬದ ಜನರು ಸರಳ, ಸಜ್ಜನರಾದ್ದರಿಂದ ಯಾವುದೇ ತೊಂದರೆಗಳಿಲ್ಲದೆ ಇಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಕಡಬ ತಾ.ಪಂ. ನ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಮಾತನಾಡಿ, ಹೊಸ ತಾಲೂಕುಗಳಲ್ಲಿ ಒಂದಾದ ಕಡಬ ತಾಲೂಕು ಪಂಚಾಯತ್‌ ಕಟ್ಟಡವನ್ನು ಮೊದಲನೆಯದ್ದಾಗಿ ನಿರ್ಮಿಸಿದರ ಹಿಂದಿನ ಶ್ರಮ ನವೀನ್‌ ಭಂಡಾರಿಗಳದ್ದು. ಅದಷ್ಟೇ ಅಲ್ಲದೆ ರಸ್ತ ಬದಿ ಅನಧಿಕೃತ ಅಂಗಡಿಗಳ ತೆರವು, ಗುಂಡ್ಯ ಕ್ರಾಸ್‌ನಲ್ಲಿ ಸಾರ್ವಜನಿಕ ಉಪಯೋಗಕ್ಕೆ ಶೌಚಾಲಯ ರಚಿಸಿದ್ದು, ನರೇಗಾ ಯೋಜನೆಯಡಿ ಪ್ರತಿ ವರ್ಷ ಗುರಿ ಮೀರಿದ ಸಾಧನೆ ಹೀಗೆ ಹಲವು ಕಾರ್ಯಗಳು ನವೀನ್‌ ಭಂಡಾರಿಗಳ ನೇತೃತ್ವದಲ್ಲಿ ನಡೆದಿದೆ ಇದು ಸದಾ ಸ್ಮರಣೀಯ ಕೆಲಸಗಳು ಎಂದು ಅಭಿನಂದಿಸಿದರು.


ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್‌ ಯನ್. ಮಾತನಾಡಿ, ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಎನ್ನುವುದು ಸಾಮಾನ್ಯ ಹಾಗಾಗಿ ಇಂದು ಕಡಬ ತಾಲೂಕಿನಿಂದ 2 ಅಧಿಕಾರಿಗಳನ್ನು ಬೀಳ್ಕೊಟ್ಟು ಗೌರವಿಸುವ ಕೆಲಸ ಮಾಡಲಾಗಿದೆ. ಇಂದು ವರ್ಗಾವಣೆಗೊಳ್ಳುತ್ತಿರುವ ನವೀನ್‌ ಭಂಡಾರಿಯವರಿಗೆ ಹಾಗೂ ಮಂಜುಳಾರವರಿಗೆ ಅಭಿನಂದಿಸಿ ಶುಭ ಹಾರೈಸಿದರು. 


ಈ ಸಂದರ್ಭ ಪುತ್ತೂರು ತಾ.ಪಂ. ಯೋಜನಾಧಿಕಾರಿ ಸುಕನ್ಯಾ, ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಿರಿಯ ಅಭಿಯಂತರರಾದ ಸಂಗಪ್ಪ ಹುಕ್ಕೇರಿ ವೇದಿಕೆಯಲ್ಲಿದ್ದರು. 


ಕಡ್ಯ ಕೊಣಾಜೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಪಳ್ಳಿಗದ್ದೆ ಪ್ರಾರ್ಥಿಸಿದರು. ಕಡಬ ತಾ.ಪಂ. ನ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಸ್ವಾಗತಿಸಿದರು, ಕೊಯಿಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಂದೇಶ್‌ ವಂದಿಸಿದರು. ಕಡಬ ತಾ.ಪಂ. ಕಚೇರಿ ವ್ಯವಸ್ಥಾಪಕರಾದ ಭುವನೇಂದ್ರ ಕುಮಾರ್‌, ಕೊಂಬಾರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಐಇಸಿ ಸಂಯೋಜಕ ಭರತ್‌ ರಾಜ್‌ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top