ಉಜಿರೆ: "ಇಡೀ ಭಾರತ ದೇಶದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೆಮ್ಮೆ ನಮ್ಮ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಕ ಘಟಕಕ್ಕೆ ಸಲ್ಲುತ್ತದೆ. ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಮಾಡುವ ಕೆಲಸವೇ ಸೇವೆ. ಕಾಲೇಜಿನ ಅಪ್ಯಾಯಮಾವಾದ ಚಟುವಟಿಕೆಗಳು ಎನ್.ಎಸ್.ಎಸ್ ನಲ್ಲಿ ಸದಾ ಜರಗುತ್ತಿವೆ. ನಿಮ್ಮಂತಹ ಅದ್ಭುತ ಸ್ವಯಂಸೇವಕರಿಂದ ಎನ್.ಎಸ್.ಎಸ್ ಯಶಸ್ವಿಯಾಗಿ ಜರುಗುತ್ತಿದೆ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಸಾಮ್ಯಗ್ದರ್ಶನ ಸಭಾಂಗಣದಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೆಪ್ಟೆಂಬರ್ 15, ಶುಕ್ರವಾರದಂದು ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ 2023-24 ಸಾಲಿನ ಉದ್ಘಾಟನಾ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ, ಉಜಿರೆಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಕಿರಣ್ ಕಾರಂತ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, "ಎನ್ಎಸ್ಎಸ್ ಅನುಭವವನ್ನು ಮೂಡಿಸುತ್ತದೆ, ನಾನು ವಿದ್ಯಾರ್ಥಿನಿಯಾಗಿದ್ದಾಗ, ಮೂರು ವರ್ಷ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಇಂದು ಈ ಸ್ಥಾನದಲ್ಲಿ ನಿಂತಿರುವುದಕ್ಕೆ ಮುಖ್ಯ ಕಾರಣ ಎನ್.ಎಸ್.ಎಸ್. ನಾಯಕತ್ವದ ಗುಣ, ಒಳ್ಳೆಯ ಜೀವನ ಶೈಲಿ, ಸೇವಾ ಮನೋಭಾವವನ್ನುಸ್ವಯಂಸೇವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು, ಎನ್.ಎಸ್. ಎಸ್ ಮುಖ್ಯ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದರು.
ಎನ್.ಎಸ್.ಎಸ್ ನಲ್ಲಿ ವರ್ಷವಿಡೀ ನಡೆದ ಕಾರ್ಯ ಚಟುವಟಿಕೆಗಳನ್ನು, 2022 -23ನೇ ಸಾಲಿನ ವಾರ್ಷಿಕ ವರದಿಯಾಗಿ, ಎನ್.ಎಸ್.ಎಸ್ ಕಾರ್ಯದರ್ಶಿ ಸಿಂಚನಾ ಓದಿದರು. ಡಾ. ಬಿ.ಎ ಕುಮಾರ್ ಹೆಗ್ಡೆ ರವರು ಸ್ವಯಂಸೇವಕರು ತಯಾರಿಸಿದ್ದ ಭಿತ್ತಿ ಪತ್ರವನ್ನು ಅನಾವರಣಗೊಳಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಕೊನೆಯದಲ್ಲಿ, ಸ್ವಯಂಸೇವಕರಲ್ಲಿ ಎನ್.ಎಸ್.ಎಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸ್ವಯಂಸೇವಕರಾದ ಧನುಷ್ ಕೆ.ಪಿ, 2017- 18ನೇ ಸಾಲಿನ ಆರ್.ಡಿ ಪರೇಡ್‌ನಲ್ಲಿ ಭಾಗವಹಿಸಿದವರು ಹಾಗೂ ಸತ್ಯಪ್ರಸಾದ್.ಪಿ, 2019-20ನೇ ಸಾಲಿನ ಆರ್.ಡಿ ಪರೇಡ್ ನಲ್ಲಿ ಭಾಗವಹಿಸಿದರು, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಶ್ರೀಮತಿ ದೀಪಾ ಆರ್. ಪಿ ಯೋಜನಾಧಿಕಾರಿಗಳು, ಲಕ್ಷ್ಮೀನಾರಾಯಣ್ ಕೆ.ಎಸ್, ಹಿರಿಯ ಯೋಜನಾಧಿಕಾರಿಗಳು ಹಾಗೂ ಹಿರಿಯ ಮತ್ತು ಕಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು. ಡಾ.ಮಹೇಶ್ ಕುಮಾರ್ ಶೆಟ್ಟಿ, ಯೋಜನಾಧಿಕಾರಿಗಳು ಸ್ವಾಗತಿಸಿದರು, ಸ್ವಯಂ ಸೇವಕಿ ಚಂದ್ರಿಕಾ ವಂದಿಸಿದರು. ಎನ್.ಎಸ್.ಎಸ್ ಉಪ ಕಾರ್ಯದರ್ಶಿ ಸುದೇಶ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ