ರಾಮಾಯಣ ಹಕ್ಕಿನೋಟ-38: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0

ಶ್ರೀರಾಮಾಯನಮ:


ಒಂದು ಪ್ರಶ್ನೆ-

ಒಂದೊಮ್ಮೆ ದಶರಥನು ಕಾಮಾಸಕ್ತನಾಗಿ ಕೈಕೇಯಿಯಲ್ಲಿಗೆ ಹೋಗದಿರುತ್ತಿದ್ದರೆ ಏನಾಗುತ್ತಿತ್ತು?

ಅರಮನೆಯತ್ತ ಹಿಂದಿರುಗಿದ ದಶರಥನು ರಾಮನನ್ನು ನೆನಪಿಸಿ ಅತಿಯಾದ ನೋವಿನಿಂದ ಎಚ್ಚರ ತಪ್ಪಿ ಬಿದ್ದನು.ಕೈಕೇಯಿಯನ್ನು ತನ್ನ ಬಳಿ ಬರಗೊಡದೆ ಕೌಸಲ್ಯೆಯ ಸಹಾಯದಿಂದ ಅವಳ ಅಂತ: ಪುರಕ್ಕೆ ಹೋದನು.


ರಾಮನಿಗೆ ವನವಾಸ.

ದಶರಥನಿಗೆ ಶೋಕವಾಸ.

ತುಂಬಾ ದುಃಖಿತಳಾದ ಕೌಸಲ್ಯೆಯನ್ನು ಸುಮಿತ್ರೆ ಸಮಾಧಾನ ಪಡಿಸಿದಳು.ಅವಳು ರಾಮನ ಬಗ್ಗೆ ಹೇಳುತ್ತಾ ಅವನು-

ಸೂರ್ಯನಿಗೆ ಸೂರ್ಯ

ಅಗ್ನಿಗೆ ಅಗ್ನಿ

ಈಶ್ವರನಿಗೆ ಮಹೇಶ್ವರ

ಶ್ರೀದೇವಿಗೆ ಶ್ರೀಪ್ರದ

ಕೀರ್ತಿಗೆ ಕೀರ್ತಿಪ್ರದ

ಕ್ಷಮೆಗೂ ಕ್ಷಮೆಯಾದವನು

ದೇವತೆಗಳ ದೇವತೆ

ಪ್ರಾಣಿಗಳಲ್ಲಿ ಸರ್ವಶ್ರೇಷ್ಠ-

ಇಂತಹ ರಾಮ ಹದಿನಾಲ್ಕು ವರ್ಷಗಳ ಬಳಿಕ ಇಲ್ಲಿಗೆ ಬಂದು ಪಟ್ಟಾಭಿಷಿಕ್ತನಾಗಿ ನಮ್ಮ ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂದು ಹೇಳಿದಾಗ ಕೌಸಲ್ಯೆ ಸಮಾಧಾನಗೊಂಡಳು.


ಅತ್ತ ರಾಮನು ತನ್ನನ್ನು ಅಯೋಧ್ಯೆಗೆ ಹಿಂತಿರುಗಲು ಹೇಳಿದ ವೃದ್ಧ ತಪಸ್ವೀ ಬ್ರಾಹ್ಮಣರನ್ನು ಸಂತೈಸಿ ಅವರಿಂದ ಬೀಳ್ಕೊಟ್ಟು, ಪ್ರಜೆಗಳಿಗೆ ಅಯೋಧ್ಯೆಗೆ ಹಿಂತಿರುಗಿ ದಶರಥ-ಭರತರನ್ನು ಪ್ರೀತಿಯಿಂದ ಕಾಣಲು ಹೇಳಿದನು.ಸಂಜೆ ವೇಳೆಗೆ ಹಿಂದಿರುಗಲು ಒಪ್ಪದ ಅಸಂಖ್ಯಾತ ಪ್ರಜೆಗಳೊಂದಿಗೆ ತಮಸಾ ನದೀ ತೀರಕ್ಕೆ ಬಂದರು.ಅಲ್ಲೇ ಎಲ್ಲರೂ ತಂಗಿದರು.


ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು 'ನಾವು ಮುನ್ನಡೆಯುವ, ನಮ್ಮ ಪ್ರಜೆಗಳು ಮತ್ತೆ ಮರದಡಿಯಲ್ಲಿ ಮಲಗುವಂತಾಗಬಾರದು.ರಾಜನು ತನ್ನ ಸುಖವನ್ನು ಪ್ರಜೆಗಳಿಗೆ ಹಂಚಬೇಕು; ದುಃಖವನ್ನು ಹಂಚಬಾರದು ತಾನೊಬ್ಬನೇ ಅನುಭವಿಸಬೇಕು' ಎನ್ನುತ್ತಾ ಸುಮಂತ್ರನಿಗೆ ರಥವನ್ನು ಸಿದ್ಧಪಡಿಸಲು ಹೇಳಿ ತಮಸಾ ನದಿಯನ್ನು ದಾಟಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top