ರಾಮಾಯಣ ಹಕ್ಕಿನೋಟ-48: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
 ಶ್ರೀರಾಮಾಯನಮ:


ಭರತನು ತನ್ನ ಸೇನೆ ಪರಿವಾರ ಗಳೊಂದಿಗೆ ಭರಧ್ವಾಜರ ಆಶ್ರಮವನ್ನು ಸಮೀಪಿಸಿದನು.ಸೇನೆಯನ್ನು ದೂರದಲ್ಲಿ ತಂಗಲು ಹೇಳಿ ವಸಿಷ್ಠರನ್ನು ಮುಂದು ಮಾಡಿಕೊಂಡು ಆಶ್ರಮವನ್ನು ಪ್ರವೇಶಿಸಿದನು.ವಸಿಷ್ಠರನ್ನು ಕಂಡಾಕ್ಷಣ ತಮ್ಮ ಆಸನದಿಂದ ಮೇಲೆದ್ದು ಆಶ್ರಮೋಚಿತ ಸ್ವಾಗತವನ್ನು ನೀಡಿ ಕಂದ ಮೂಲ ಫಲಾದಿಗಳನ್ನು ನೀಡಿ ಎಲ್ಲರನ್ನೂ ಸತ್ಕರಿಸಿದರು.ಭರತನ ಅಂತರಾಳವನ್ನು ತಿಳಿದಿದ್ದರೂ ಬೇಕೆಂದೇ ಭರತನನ್ನು ಪರೀಕ್ಷಿಸುವಂತೆ-ರಾಮನಿಗೆ ಮತ್ತು ಅವನ ತಮ್ಮನಿಗೆ ಕೇಡುಂಟು ಮಾಡಲು ಬಂದಿಲ್ಲ ತಾನೇ?- ಎಂದು ಕೇಳಿದಾಗ ಭರತನು ತುಂಬಾ ನೊಂದುಕೊಂಡನು.ಭರತನ ಇಚ್ಛೆಗೆ ವಸಿಷ್ಠರೂ ಧ್ವನಿ ಸೇರಿಸಿದಾಗ ಸಂತಸಗೊಂಡು ಭರತನಿಗೆ ಮತ್ತು ಅವನೊಡನೆ ಬಂದ ಎಲ್ಲರಿಗೂ ಸ್ವರ್ಗ ಸಮಾನವಾದ ಸತ್ಕಾರವನ್ನು ತಮ್ಮ ವಿಶೇಷ ತಪಸ್ಸಿನ ಶಕ್ತಿಯಿಂದ ನೀಡಿದರು.ಆ ಸತ್ಕಾರವು ಹೇಗಿತ್ತೆಂದರೆ- ನಾವಿನ್ನು ಅಯೋಧ್ಯೆಗೂ ಹೋಗುವುದಿಲ್ಲ ಭರತನೊಡನೆ ದಂಡಕಾರಣ್ಯಕ್ಕೂ ಹೋಗುವುದಿಲ್ಲ...ಇದೇ ಸ್ವರ್ಗ- ಇದೇ ಸ್ವರ್ಗ ಸುಖ- ಎಂದು ಸೈನಿಕರೇ ಮೊದಲಾದವರು ಕೂಗಿಕೊಳ್ಳುತ್ತಿದ್ದರು.ದೇವತೆಗಳು ಭರಧ್ವಾಜರ ಕರೆಯ ಮೇರೆಗೆ ನೀಡಿದ ಒಂದಿರುಳಿನ ಆತಿಥ್ಯವೆಂದು ಅರಿವಾದದ್ದು ಮರುದಿನವೇ!


ಮರುದಿನ ಭರತನು ತನ್ನ ತಾಯಂದಿರನ್ನು ಭರಧ್ವಾಜರಿಗೆ ಪರಿಚಯಿಸಿ ಅವರಿಗೆ ಸುತ್ತು ಬಂದು ನಮಸ್ಕರಿಸಿ ಅವರ ಆಶೀರ್ವಾದ ಪಡೆದು ಅವರೇ ಸೂಚಿಸಿದಂತೆ ಚಿತ್ರ ಕೂಟದತ್ತ ಪಯಣವನ್ನು ಮುಂದುವರೆಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top