ರಾಮಾಯಣ ಹಕ್ಕಿನೋಟ-47: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0


ಕೈಕೇಯಿ ಮಂಥರೆಯರು ಅವರ ಪಾಲಿಗೆ ಬದುಕಿ ಉಳಿದರು!!


ಭರತನ ಪಾಲಿಗೆ ರಾಜನು ಅನುಭವಿಸುತ್ತಿದ್ದ ದುಃಖ ಗಳೆಲ್ಲವೂ ಬಂದವು. ಪಟ್ಟವನ್ನೇರಲು ನೀಡಿದ ಮಂತ್ರಿಗಳ ಸಲಹೆಗಳನ್ನು ತಿರಸ್ಕರಿಸಿದನು.ವಂಶಪಾರಂಪರಿಕವಾಗಿ ಬಂದಿರುವ ಹಿರಿಮಗನಿಗೇ ಪಟ್ಟ ಎನ್ನುವ ನಿಲುವಿಗೆ ಅವನು ಎಷ್ಟು ಬದ್ಧನಾಗಿದ್ದನೆಂದರೆ ವಸಿಷ್ಠರ ಆದೇಶವನ್ನೂ ಶ್ರೀರಾಮನನ್ನು ಸ್ಮರಿಸುತ್ತಾ ನಯವಾಗಿ ತಿರಸ್ಕರಿಸಿದನು.ರಾಮನ ರಾಜ್ಯ ರಾಮನಿಗೆ."ರಾಮನನ್ನು ಕಾಡಿನಿಂದ ಮರಳಿ ಕರೆತಂದು ಅವನನ್ನೇ ರಾಜನನ್ನಾಗಿಸುವುದು, ಅದಕ್ಕೆ ಅವನು ಒಪ್ಪದಿದ್ದರೆ ನಾನೂ ವನವಾಸಿಯಾಗುವುದು."ಎಂಬ ತನ್ನ ಅಚಲ ನಿರ್ಧಾರವನ್ನು ಪ್ರಕಟಿಸಿದ ಮೇಲೆ ಎಲ್ಲರೂ ಒಮ್ಮತದಿಂದ ರಾಮನನ್ನು ಮರಳಿ ಕರೆತರುವ ನಿರ್ಧಾರಕ್ಕೆ ಬಂದರು.ಭರತನು ವಸಿಷ್ಠರ ಸಲಹೆಯಂತೆ  ವನಯಾತ್ರೆ ಕೈಗೊಳ್ಳಲು ಮಾಡಬೇಕಾದ ಎಲ್ಲಾ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಚಿವರುಗಳಿಗೆ ಆದೇಶಿಸಿದನು.


ಶ್ರೀರಾಮನನ್ನು ಕರೆತರಲು ಭರತನು ಉತ್ತಮವಾದ ರಥದಲ್ಲಿ,ಉಳಿದವರು ದಿವ್ಯ ರಥಗಳಲ್ಲಿ ಕುದುರೆಗಳಲ್ಲಿ ಸಾಯುಧರಾಗಿ ಹೊರಟರು.ತಾಯಂದಿರೂ ಜೊತೆಗೂಡಿದರು.ಭರತನ ವನಯಾತ್ರೆ ಆರಂಭವಾಯಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top