ನಿಟ್ಟೆ ಕ್ಯಾಂಪಸ್‌ಗೆ ಪ್ರೊಫೆಸರ್ ಡಾ| ಶ್ರೀಪಾದ್ ರೇವಣ್ಕರ್ ಭೇಟಿ

Upayuktha
0

 



ನಿಟ್ಟೆ: ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ|ಶ್ರೀಪಾದ್ ರೇವಣ್ಕರ್ ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಸೆಂಟರ್ ಸಂಸ್ಥೆಯಾಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೆ.24 ರಂದು ಭೇಟಿ ನೀಡಿದರು.


ಪ್ರೊ. ರೇವಣ್ಕರ್ ಅವರು ವಿವಿಧ ಇಂಧನ ಕೋಶ ಮತ್ತು ಹಸಿರು ಇಂಧನ ಸಂಶೋಧನಾ ಉಪಕ್ರಮಗಳಲ್ಲಿ ಸಂಶೋಧನಾ ಕೆಲಸ ನಡೆಸುತ್ತಿದ್ದು, ಪ್ರಪಂಚದಾದ್ಯಂತ ಹಲವಾರು ವಿಶ್ವ ವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.



ಈ ಭೇಟಿಯ ಸಮಯದಲ್ಲಿ, ಅವರು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಲುಂಕರ್, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಯ ಸಲಹೆಗಾರ ಪ್ರೊ.ಗೋಪಿನಾಥ್, ಇಲೆಕ್ಟ್ರಿಕಲ್ ವಿಭಾಗದ ಪ್ರಾಧ್ಯಾಪಕ ಡಾ| ಸತ್ಯೇಂದ್ರ ಶೇಟ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ|ರಘುನಂದನ್ ಕೆ.ಆರ್ ಅವರೊಂದಿಗೆ ಸಭೆ ನಡೆಸಿ ತಮ್ಮ ಪರಿಣತಿ ಕ್ಷೇತ್ರದಲ್ಲಿ ಇತ್ತೀಚಿನ ಸಂಶೋಧನಾ ಅವಕಾಶಗಳ ಬಗೆಗೆ ಚರ್ಚಿಸಿದರು.


ಇದಲ್ಲದೆ, 2023 ರ ಡಿಸೆಂಬರ್ 19 ಹಾಗೂ 20 ರಂದು ನಡೆಯಲಿರುವ ನಿಟ್ಟೆ ತಾಂತ್ರಿಕ ಕಾಲೇಜಿನ ಎರಡು ದಿನಗಳ 'ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್' ಅಂತಾರಾಷ್ಟ್ರೀಯ ಮಟ್ಟದ ಮಲ್ಟಿ ಕಾನ್ಫರೆನ್ಸ್ 'ಐಸಿಇಟಿಇ-2023' ಗೆ ಮುಖ್ಯ ಅತಿಥಿ ಮತ್ತು ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ಪ್ರೊ.ರೇವಣ್ಕರ್ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಲಾಯಿತು. ಪ್ರೊ. ರೇವಣ್ಕರ್ ಅವರು ಆಹ್ವಾನ ಸ್ವೀಕರಿಸಿ ಆಯ್ದ ಕ್ಷೇತ್ರದಲ್ಲಿ ಬೋಧಕರು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಲು ಹರ್ಷ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top