ಪುತ್ತೂರು: ವೃದ್ಧಾಶ್ರಮದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ವಾಣಿಯ ವತಿಯಿಂದ "ವೃದ್ಧರಿಗೆ ಆಶ್ರಮ ಬೇಕಾಗಿಲ್ಲ ಪ್ರೀತಿಯ ಆಸರೆ ಬೇಕು" ಎಂಬ ಅಭಿಯಾನಕ್ಕೆ ಪ್ರಣವ್ ಭಟ್ 'ತಂದೆ ತಾಯಿಯೇ ದೇವರು' ಎನ್ನುವ ಕಿರುಪುಸ್ತಕವನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅವರು ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಗಣಪತಿ ಭಟ್ ಅವರು ಉಪಸ್ಥಿತರಿದ್ದರು.
ಕರ್ನಾಟಕದ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ತಲುಪಿಸುವ ಯೋಜನೆಯೊಂದಿಗೆ ಈ ಅಭಿಯಾನ ಆರಂಭ ಮಾಡಿದ್ದು, ಶಾಲೆಗಳಿಗೆ ನೀಡಲು ಪ್ರತಿಗಳು ಬೇಕಾದಲ್ಲಿ ಸಂಪರ್ಕಿಸಬಹುದು.
ಪ್ರಣವ ಭಟ್, ಪುತ್ತೂರು
ಸಂಪರ್ಕ: 9380770883
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ