ಬೆಂಗಳೂರು: ನಾಟ್ಯ ತರಂಗ ನೃತ್ಯಾಲಯದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಕಲಾಗ್ರಾಮ, ಮಲ್ಲತ್ತಹಳ್ಳಿಯಲ್ಲಿ ಅಕ್ಟೋಬರ್ 1, ಭಾನುವಾರ ಬೆಳಗ್ಗೆ 9-00 ಗಂಟೆಗೆ ಸಂಸ್ಥೆಯ ನಿರ್ದೇಶಕರೂ, ಗುರುಗಳೂ ಆದ ವೀಣಾ ಗಂಗಾಧರ್ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ನೀಡಲಿದ್ದಾರೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವನಾಥ ಪಿ. ಹಿರೇಮಠ (ಆಯುಕ್ತರು, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಆಯುಕ್ತಾಲಯ, ಕರ್ನಾಟಕ ಸರ್ಕಾರ) ಮತ್ತು ವಿದುಷಿ ಉಷಾ ಬಸಪ್ಪ (ನಿರ್ದೇಶಕರು, ಪದ್ಮನಿಪ್ರಿಯ ನೃತ್ಯ ಕಲಾ ಅಕಾಡೆಮಿ) ಆಗಮಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


