ರಾಮಕೃಷ್ಣ ಮಠದಲ್ಲಿ ಯೋಗಾಸನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Upayuktha
0


ಮಂಗಳೂರು: 40 ವರ್ಷಗಳಿಂದ ಯೋಗ ಶಿಕ್ಷಣ ಮೂಲಕ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿರುವ “ಯೋಗರತ್ನ” ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ಸಪ್ಟೆಂಬರ್ ತಿಂಗಳ 2 ವಾರಗಳ ಕಾಲ ಜರಗಲಿರುವ ಯೋಗ ಶಿಬಿರ ಉದ್ಘಾಟನೆಗೊಂಡಿತು.


ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮನಂದ ಜೀ ಮಹಾರಾಜ್ ತಮ್ಮ ಆಶೀರ್ವಚನದಲ್ಲಿ ಮನಸ್ಸಿನ ಚಂಚಲತೆಯನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಯೋಗ, ನಿತ್ಯ ನಿರಂತರ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ, ಶಾಂತಿ, ನೆಮ್ಮದಿ ದೊರಕುತ್ತದೆ ಹಾಗೂ ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಯೋಗವು ದೇಹದೊಳಗೆ ಸರಿಯಾದ ಸಮನ್ವಯ ಮತ್ತು ಸೂಕ್ಷ್ಮಬಲದ ಹಿಡಿತದಲ್ಲಿ ಸಹಾಯ ಮಡುತ್ತದೆ. ಇದು ಪರಿಪೂರ್ಣತೆ, ಶಾಂತಿ ಮತ್ತು ಎಂದೂ ಕುಂದದ ಸಂತೋಷವನ್ನು ತರುತ್ತದೆ. ಯೋಗಾಭ್ಯಾಸವು ಎಲ್ಲ ಸಮಯದಲ್ಲೂ ಒಟ್ಟಾರೆ ಸಮಾಧಾನವನ್ನು ತರುತ್ತದೆ. ಇದು ವಿಶ್ರಾಂತವಾದ ಮತ್ತು ಶಾಂತಿಯುಕ್ತ ನಿದ್ರೆಯನ್ನು ತರುವುದಲ್ಲದೆ, ಬಲ, ಚೈತನ್ಯ, ಲವಲವಿಕೆ, ದೀರ್ಘಾಯುಸ್ಸನ್ನು ಹಾಗೂ ಜನರಲ್ಲಿ ಆರೋಗ್ಯಮಟ್ಟವನ್ನೂ ಹೆಚ್ಚಿಸುತ್ತದೆ. ಯೋಗವು ಸಂಸ್ಕøತದ ‘ಯುಜ್’ ಎಂಬ ಧಾತುವಿನಿಂದಾಗಿದ್ದು ಸೇರು, ಜೋಡಿಸು, ಅಥವಾ ಒಂದಾಗು ಎಂಬ ಅರ್ಥಹೊಂದಿದೆ. ನಿತ್ಯ ಸತ್ಯದೊಂದಿಗೆ ಆತ್ಮದ ಸಂಯೋಗ, ದ್ವಂದ್ವಗಳ ಗೆಲುವಿನಿಂದ ಏಳುವ ಕಲಬೆರಕೆಯಿಲ್ಲದ ಒಟ್ಟಾರೆ ಪರಮಾನಂದದ ಸ್ಥಿತಿಯ ಸಂಯೋಜನೆಯೇ ಯೋಗವಾಗಿದೆ. ಯೋಗದ ಅಧ್ಯಯನದಿಂದ ಸೂಕ್ಷ್ಮಗ್ರಹಿಕೆ ಶಕ್ತಿಯ ಮೊನಚನ್ನು ಶಿಸ್ತುಬದ್ಧಗೊಳಿಸುತ್ತದೆ ಹಗೂ ಆತ್ಮದ ನೈಜ ಪ್ರಕೃತಿಯನ್ನು ತಿಳಿಯುವೆಡೆಗೆ ಕೊಂಡೊಯ್ಯುತ್ತದೆ ಈ ಆತ್ಮವು ಮಾನವ ಜ್ಞಾನದಿಂದ ಅಥವ ಬುದ್ಧಿಮಾತ್ರದಿಂದಲೂ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಯೋಗದ ಅಧ್ಯಯನ ಮತ್ತು ಅಭ್ಯಾಸ ಶುದ್ಧಜ್ಞಾನದ ಸ್ಥಿತಿಯನ್ನು ಪಡೆಯಲು ಹಾಗೂ ಆಂತರಿಕವಾಗಿ ಅರಿಯಲು ಸಾಧ್ಯವಾಗಿಸುತ್ತದೆ.


ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ರಾಮಚಂದ್ರ ಕೆ. ಎಸ್. ರವರು ಯೋಗ ಮಾಡುವ ಮೂಲಕ ಕಾಯಿಲೆ ಮುಂದೂಡಬಹುದು ಹಾಗೂ ಮನಸ್ಸನ್ನು ಸುಸ್ಥಿತಿಯಲ್ಲಿ ಇಡಲು ಯೋಗ ಸಹಕಾರಿಯಾಗುತ್ತದೆ ಎಂದರು. ಬುದ್ಧಿವಂತಿಕೆ ಮತ್ತು ತತ್ವಶಾಸ್ತ್ರದಜೊತೆಗೆ ಯೋಗ ಆಸನಗಳು,ಉಸಿರಾಟದ ತಂತ್ರಗಳು ಮತ್ತು ಆಳವಾದ ಧ್ಯಾನದ ವಿಶ್ರಾಂತಿ ಸಂಯೋಜನೆಯಾಗಿದೆ. ಪ್ರತಿಯೊಂದು ಯೋಗಾಸನವು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯಲ್ಲಿ ಆಳವಾಗಿ ಸಹಾಯ ಮಾಡುತ್ತದೆ. ಆದ್ದರಿಂದ ಇದು ಹೃದಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಕೆಲವು ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ. ಕಡಿಮೆ ರಕ್ತದೊತ್ತಡ ಕಡಿಮೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಸುಧಾರಿತ ಹೃದಯ ಬಡಿತ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ಒತ್ತಡವನ್ನು ಎದುರಿಸಲು ಯೋಗವು ಪರಿಣಾಮಕಾರಿಯಾಗಿದೆ. ಇದು ಹೃದಯವು ಹೆಚ್ಚು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.


ಈ ಕಾರ್ಯಕ್ರಮದ ಪ್ರಾರ್ಥನೆಯನ್ನು ಚಂದ್ರಹಾಸ್ ಹಾಗೂ ನಿರೂಪಣೆಯನ್ನು ಕಾರ್ತಿಕ್ ಶೆಟ್ಟಿ ನಡೆಸಿದರು. ನೂತನವಾಗಿ ಯೋಗ ಕಲಿಯುವ ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಬಹುದು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top