ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠ: ಸಲಹಾ ಸಮಿತಿ ಪುನಾರಚನೆ

Upayuktha
0

 

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಪುನಾರಚನೆಗೊಂಡಿದ್ದು, ನೂತನ ಸದಸ್ಯರಾಗಿ ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಮೀರಾ ಕೆ.ಎ, ಬಂಗ್ರಕೂಳೂರು ಕರಾವಳಿ ಕಾಲೇಜಿನ ಪ್ರಾಂಶುಪಾಲ ಮೋಹನ್ ನಾಯ್ಕ್, ಬ್ಯಾರಿ ಸಾಹಿತ್ಯ ಕ್ಷೇತ್ರದಿಂದ ಪತ್ರಕರ್ತ ಹಂಝ ಮಲಾರ್, ಖಾಲಿದ್ ತಣ್ಣೀರುಬಾವಿ, ಬಶೀರ್ ಬೈಕಂಪಾಡಿ, ಬಿ ಎ ಮಹಮ್ಮದ್ ಹನೀಫ್, ಶೈಕ್ಷಣಿಕ ಕ್ಷೇತ್ರದಿಂದ ಡಾ. ಇಸ್ಮಾಯಿಲ್ ಎನ್ ಹಾಗೂ ಮೊಯಿದೀನ್ ಬಾದ್ ಷಾ ನಾಮನಿರ್ದೇಶನ ಗೊಂಡಿರುತ್ತಾರೆ.


ಕುಲಪತಿಗಳು ಅಧ್ಯಕ್ಷರಾಗಿರುವ ಸಲಹಾ ಸಮಿತಿಗೆ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಯವರು ಕೂಡಾ ಸದಸ್ಯರಾಗಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಖಾಯಂ ಆಹ್ವಾನಿತರಾಗಿರುತ್ತಾರೆ. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದಿಕ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ, ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top