ಮಂಗಳೂರು: ಮಂಗಳೂರಿನ ತ್ರಿಮತಸ್ಥ ವಿಪ್ರ ಬಾಂಧವರು ಸೇರಿಕೊಂಡು ಲೋಕಕಲ್ಯಾಣಾರ್ಥವಾಗಿ ಬಾಹ್ಯ ಶಕ್ತಿಗಳಿಂದ ಬ್ರಾಹ್ಮಣ್ಯದ ಮೇಲಾಗುವ ದೌರ್ಜನ್ಯಗಳನ್ನು ಕೊನೆಗಾಣಿಸಲು ದೇಶದ ಸುಭಿಕ್ಷೆಗಾಗಿ ಅಕ್ಷರ ಲಕ್ಷ ಗಾಯತ್ರಿ ಯಜ್ಞವನ್ನು ಇತ್ತೀಚೆಗೆ ನಗರದ ಬಾಳಂಭಟ್ ಹಾಲ್‌ನಲ್ಲಿ ವೇದ ವಿದ್ಯಾ ಪಾರಂಗತರಾದ ಡಾ. ಸತ್ಯಕೃಷ್ಣ ಭಟ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಕ್ರಮವಾಗಿ ಐದು ಕುಂಡಗಳಲ್ಲಿ ಆಯೋಜಿತಗೊಂಡ ಯಜ್ಞದಲ್ಲಿ ವೇದಮೂರ್ತಿ ಚಂದ್ರ ಐತಾಳ್ ಮಂಗಳಾದೇವಿ, ವೇದಮೂರ್ತಿ ಶಶಿಧರ ಭಟ್, ವೇದಮೂರ್ತಿ ಸುಬ್ರಮಣ್ಯ ಭಟ್, ವೇದಮೂರ್ತಿ ವಾಸ್ತು ತಜ್ಞ ಕೃಷ್ಣರಾಜ ಭಟ್ ಕುಡುಪು, ವೇದಮೂರ್ತಿ ಶ್ರೀಕರ ಭಟ್, ವೇದಮೂರ್ತಿ ಸುಭಾಷ್ ಪರಾಂಜಪೆ, ವೇ. ಮೂ ಪೊಳಲಿ ಗಿರಿಪ್ರಕಾಶ್ ತಂತ್ರಿ ಮೊದಲಾದವರು ನಡೆಸಿಕೊಟ್ಟರು. ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ 'ಗಾಯತ್ರಿ ಮಹತ್ವ'ದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಟೀಲಿನ ತಂತ್ರಿಗಳಾದ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ವಿದ್ವಾನ್ ಶ್ರೀಹರಿನಾರಾಯಣ ದಾಸ ಆಸ್ರಣ್ಣ, ವೇ. ಮೂ ವೆಂಕಟರಮಣ ಆಸ್ರಣ್ಣ, ಡಾ. ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿಗಳು, ಪದಾಧಿಕಾರಿಗಳಾದ ಡಾ. ಎಂ ಎಂಬಿ ಪುರಾಣಿಕ್, ಪ್ರದೀಪ್ ಕಲ್ಕೂರ, ಕೃಷ್ಣಮೂರ್ತಿ ಶಿಕಾರಿಪುರ, ಕೃಷ್ಣ ಭಟ್ ಕದ್ರಿ, ಭರತಾಂಜಲಿಯ ಶ್ರೀಧರ ಹೊಳ್ಳ, ಗುರುಪ್ರಸಾದ್ ದಡ್ಡಿ, ಉದಯಕುಮಾರ್, ನಾಗರಾಜ್, ಸುಧಾಕರ ಪೇಜಾವರ, ಸಮತಾ ಬಳಗದ ವಂದನರಾವ್ ಮತ್ತು ಪದಾಧಿಕಾರಿಗಳು ಹಾಗೂ ನಗರದ ಪ್ರತಿಷ್ಠಿತ ವಿಪ್ರಬಾಂಧವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾತೆಯರಿಂದ ಲಲಿತಾ ಸಹಸ್ರ ನಾಮ ಪಠಣ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ