ಕೇವಲ ಪಠ್ಯಪುಸ್ತಕದಿಂದ ಜೀವನ ಕೌಶಲ್ಯ ದೊರೆಯುವುದಿಲ್ಲ: ಡಾ. ರವಿ ಎಂ.ಎನ್

Upayuktha
0


ಉಜಿರೆ:
ಈಗಿನ ಪಠ್ಯಕ್ರಮಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವ ಕಡೆಗೆ ಮಾತ್ರ ಗಮನ ನೀಡುತ್ತದೆ, ಹೊರತು ಬದುಕಲು ಬೇಕಾದ ಜೀವನ ಕೌಶಲ್ಯ ಕಲಿಸುವುದಿಲ್ಲ. ಜೀವನ ಸುಗಮವಾಗಿ ಸಾಗಿಸಲು ಬುದ್ಧಿವಂತಿಕೆ, ಉತ್ಸಾಹ, ಶ್ರದ್ಧೆ, ಬದ್ಧತೆಯ ಅಂಶಗಳು ಅಗತ್ಯವಾಗಿದೆ. ಇವುಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಸಿಸಿಎ ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು  ಜಿ.ಎಫ್.ಜಿ.ಸಿ ಮೇಲಂತಬೆಟ್ಟು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರವಿ ಎಂ ಎನ್ ನುಡಿದರು.


ಅವರು ಉಜಿರೆಯ ಶ್ರೀ ಧ.ಮ. ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸೆ.23 ರಂದು 2023-24ನೇ ಸಾಲಿನ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ (ಸಿಸಿಎ) ಸಂಘವನ್ನು ಉದ್ಘಾಟಿಸಿ  ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಎ ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತದ ವಿದ್ಯಾರ್ಥಿಗಳನ್ನು ಒಳಗೊಂಡ ಸಂಘ ಇದಾಗಿದ್ದು, ವಿದ್ಯಾರ್ಥಿಗಳ ಕೌಶಲ್ಯ, ವ್ಯವಹಾರಿಕ ಗುಣ, ನಡತೆ, ಪ್ರತಿಭೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ಹಲವಾರು ಚಟುವಟಿಕೆಗಳನ್ನು ನಡೆಸುವ ಯೋಜನೆ ಹಮ್ಮಿಕೊಂಡಿದೆ.

  

ಇದೇ ಸಂದರ್ಭದಲ್ಲಿ‘ಜಿಎಸ್‌ಟಿಲಾ & ಪ್ರಾಕ್ಟಿಸಸ್ ಮತ್ತುಇನ್ ಕಮ್ ಟ್ಯಾಕ್ಸ್ಲಾ & ಪ್ರಾಕ್ಟಿಸಸ್’ಎಂಬ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಪುಸ್ತಕವನ್ನು ಡಾ. ರವಿ ಎಂ ಎನ್, ಡಾ. ಸುಮನ್ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕ ಭಾನುಪ್ರಕಾಶ್ ಬಿ ಇ ಇವರು ಬರೆದಿದ್ದಾರೆ. ಇದರೊಂದಿಗೆ ‘ವನಿಕ’ –ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ, ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಂಘದ ಕಾರ್ಯದರ್ಶಿ ಸುವಿತ್ ಶೆಟ್ಟಿ ಕಳೆದ ವರ್ಷದ ಸಂಘದ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು. 


  

ಈ ಸಂದರ್ಭದಲ್ಲಿ ಡಾ. ರವಿ ಎಂ ಎನ್, ಡಾ. ಬಿ.ಎ ಕುಮಾರ್ ಹೆಗ್ಡೆ, ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಾಕುಂತಲಾ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ, ಸಂಘದ ಉಸ್ತುವಾರಿ ಪ್ರಾಧ್ಯಾಪಕರಾದ ವಿನುತ ಹಾಗೂ ಗುರುರಾಜ್, ಸಂಘದ ಸಿಇಓ ಆದರ್ಶ ಬೇಕಲ್ ಮತ್ತು ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜೆನಿಫರ್ ಮತ್ತು ಮಧುರ ಕಾರ್ಯಕ್ರಮ ನಿರೂಪಿಸಿ, ಆದರ್ಶ ಬೇಕಲ್ ಸ್ವಾಗತಿಸಿ, ಶರಧಿ ಹೊಳ್ಳ ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top