'ನಿಜವಾದ ಸಿನಿಮಾ ಪ್ರೀತಿ ಇರೋದು ಕಂಟೆಂಟ್ ಸಿನಿಮಾ ಮಾಡುವವರಲ್ಲಿ'

Upayuktha
0

ಜಲಪಾತ ಟ್ರೇಲರ್ ಬಿಡುಗಡೆಯಲ್ಲಿ ಜೋಗಿ ಮಾರ್ಮಿಕ ಮಾತು




ಬೆಂಗಳೂರು: ನಾನು ಬಹುಕೋಟಿ ಸಿನಿಮಾಗಳ ಕುರಿತು ಮಾತಾಡಲಾರೆ. ನನಗೆ ಸಣ್ಣ ಸಿನಿಮಾ ಮಾಡುವವರೆಂದರೆ ಅಕ್ಕರೆ. ಯಾಕೋ ನಿಜವಾದ ಸಿನಿಮಾ ಪ್ರೀತಿ ಕಂಟೆಂಟ್ ಸಿನಿಮಾ ಮಾಡುವವರಲ್ಲಿ ಹೆಚ್ಚು ಆಪ್ತವಾಗಿರುತ್ತದೆ ಎಂದು ಪ್ರಖ್ಯಾತ ಸಾಹಿತಿ ಜೋಗಿ ತಿಳಿಸಿದರು.


ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿದ ಜಲಪಾತ ಎಂಬ ಪರಿಸರ ಕಾಳಜಿಯ  ಕಥೆ ಹೊಂದಿದ ಮಲೆನಾಡ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಅವರು ಮಾತನಾಡಿದರು.


ಸಿನಿಮಾ ರಂಗವು ಸಾಯಿಸುವ ಕಥೆಗಳಿಂದ ನೈತಿಕ ಮೌಲ್ಯಗಳಿಂದ ಬಹಳ ದೂರ ಸರಿಯುತ್ತಿದೆ ಎಂದು ವಿಷಾದಿಸಿದ ಜೋಗಿ, ಪ್ರಾದೇಶಿಕತೆಯ ಆಧಾರದಲ್ಲಿ ಪುಟ್ಟ ಪುಟ್ಟ ತಂಡಗಳು ಕಟ್ಟುವ ಸಿನಿಮಾಗಳು ಬದುಕಿಸುವ ಕಥೆ ಹೇಳುತ್ತವೆ. ಇವುಗಳು ವ್ಯಾವಹಾರಿಕವಾಗಿ ಗೆಲ್ಲದಿರಬಹುದು ಆದರೆ ಹೃದಯವನ್ನು ಗೆಲ್ಲುತ್ತವೆ ಎಂದು ಮಾರ್ಮಿಕವಾಗಿ ತಿಳಿಸಿದರು. ರವೀಂದ್ರ ಮತ್ತು ರಮೇಶ್ ರಂಥವರ ಇಂಥ ಪ್ರಯತ್ನಗಳು ಈ ಕಾರಣಕ್ಕೆ ಗೆಲ್ಲಬೇಕೆಂದು ಅವರು ಹೇಳಿದರು.


ಈ ಸಂದರ್ಭ ಚಿತ್ರದ ಪ್ರಧಾನ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಈ ತಾಂತ್ರಿಕ ತಂಡದೊಂದಿಗೆ ನನ್ನ 2ನೇ ಸಿನಿಮಾ.  ಇವರ ಡೆಡಿಕೇಷನ್ ನನ್ನನ್ನು ಇವರೊಂದಿಗೆ ಜೋಡಿಸಿದೆ ಎಂದರು.


ನಿರ್ಮಾಪಕ ರವೀಂದ್ರ ತುಂಬರಮನೆ ಮಾತನಾಡಿ, ಪರಿಸರ ಕಾಳಜಿಯೆಂದರೆ ಬರೇ ವನಮಹೋತ್ಸವ ಎಂಬ ಈವೆಂಟ್ ಅಲ್ಲಾ. ಅದರ ವಿಸ್ತಾರ, ಆಳ ಅಗಲಗಳು ಮನುಕುಲದೊಂದಿದೆ ತಳುಕು ಹಾಕಿಕೊಂಡಿದೆ. ಇದನ್ನೇ ಸಿನಿಮಾ ಅವರವರ ವೈಯಕ್ತಿಕ ನೆಲೆಯಲ್ಲಿ ಜವಾಬ್ಧಾರಿ ಯ ಅರಿವು ಮೂಡಿಸುತ್ತದೆ. ಇದೊಂದು ಮೊದಲ ಪ್ರಯೋಗ. ಇನ್ನೂ ಮುಂದುವರೆಯುತ್ತದೆ ಎಂದು ತಿಳಿಸಿದರು.


ಪದವಿ ಪೂರ್ವ ಸಿನಿಮಾದ ನಾಯಕ ನಟ ಪೃಥ್ವಿ ಶಾಮನೂರು ಉಪಸ್ಥಿತರಿದ್ದು ಗೆಳೆಯ ರಜನೀಶ್ (ನಾಯಕ) ಇವರಿಗೆ ಶುಭ ಹಾರೈಸಿದರು.


ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ, ನಾಯಕಿ ನಾಗಶ್ರೀ, ಗಾಯಕಿ ಪದ್ಮಿನಿ ಓಕ್, ಡಿ ಒ ಪಿ ಶಶೀರ ಮತ್ತು ಕಲಾವಿದರಾದ ಅಭಿಷೇಕ್, ಕಾರ್ತಿಕ್, ರಶ್ಮಿ, ಯಶ್ವಂತ್, ಚಿದಾನಂದ ಹೆಗ್ಗಾರ್, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


ಜಲಪಾತ ಟ್ರೇಲರ್ ಒಂದು ಮಲೆನಾಡ ಲೋಕವನ್ನು ಕುತೂಹಲಕಾರಿಯಾಗಿದ್ದು ಈಗಾಗಲೇ ಜನಮಾನಸವನ್ನು ಸೆಳೆಯುತ್ತಿದೆ. ಈ ಟ್ರೇಲರ್ ರನ್ನು ಎ- 2 ಮ್ಯೂಸಿಕ್ ವಾಹಿನಿಯು ಬಿಡುಗಡೆಗೊಳಿಸಿದೆ. ಅಕ್ಟೋಬರ್ ಮೊದಲವಾರ ಚಿತ್ರ ಬಿಡುಗಡೆಗೊಳಿಸುವ ಉದ್ದೇಶದಲ್ಲಿ ಚಿತ್ರತಂಡ ವ್ಯಸ್ತವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top