ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ತೃತೀಯ ವರ್ಷದ ಜೀವ ವಿಜ್ಞಾನ ವಿದ್ಯಾರ್ಥಿಗಳು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಇತ್ತೀಚೆಗೆ ಅಂತರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು ಆಚರಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದರಾಜು ಎಂ. ಎನ್ ಮಾತನಾಡಿ, ಮಾಂಟ್ರಿಯಲ್ ಒಪ್ಪಂದ, ಕಿಗಲೀ ಒಪ್ಪಂದ ಹಾಗೂ ಸಿಎಫ್‌ಸಿ, ಹೆಚ್‌ಸಿಎಫ್‌ಸಿ ಗಳ ಉಪಯೋಗದಿಂದಾಗುವ ಓಜೋನ್ ಪದರ ಸವಕಳಿ ಮತ್ತು ತಾಪಮಾನ ಏರಿಕೆ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸಿಎಫ್‌ಸಿಗಳ ಉತ್ಪಾದನೆ ಮತ್ತು ಬಳಸುವಿಕೆಯನ್ನು ನಿರ್ಬಂಧಿಸಿದ ನಂತರ ಅದರ ಬದಲಾಗಿ ಉಪಯೋಗಿಸುತ್ತಿರುವ ಹಲವು ರಾಸಾಯನಿಕಗಳು ತಾಪಮಾನ ಏರಿಕೆಗೆ ಕಾರಣವಾಗುತ್ತಿವೆ, ಎಂದರು.
ಇದೆ ರ್ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಲೇಖನ್, ವನೀಶ್, ಸೃಜನ್, ಮತ್ತು ಅಕ್ಷಯ್ ರವರು ಪ್ರಥಮ ವಿಜ್ಞಾನ ವಿದ್ಯಾರ್ಥಿಗಳಿಗೆ ಓಜೋನ್ ಸಂಬಂಧಿತ ಮೂಕಾಭಿನಯ, ಒಗಟುಗಳು ಮತ್ತು ತಾರ್ಕಿಕ ಪ್ರಶ್ನಾವಳಿ ಚಟುವಟಿಕೆಗಳನ್ನು ನಡೆಸಿ ಓಜೋನ್ ದಿನವನ್ನು ಆಚರಿಸಿದರು.
ತೃತೀಯ ವಿಜ್ಞಾನ ವಿದ್ಯಾರ್ಥಿನಿ ದೇವಕಿ, ಸ್ವಾತಿ ನಾಯಕ್ ಹಾಗೂ ಕು. ಖುಷಿ ಕಾರ್ಯಕ್ರಮ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ