ಬಾಹ್ಯಾಕಾಶಕ್ಕೆ ಭಾರತದ ಯಶಸ್ವಿ ಹೆಜ್ಜೆ: ಪ್ರೊ.ಟಿ.ಎನ್. ಕೇಶವ್

Upayuktha
0


ಉಜಿರೆ: ಇಸ್ರೋ ಸಂಸ್ಥೆಯು ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಇಳಿಸುವ ಮೂಲಕ ವಿಶ್ವ ಬಾಹ್ಯಾಕಾಶಕ್ಕೆ ಭಾರತ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಉಜಿರೆಯ ಶ್ರೀ ಧ. ಮ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಟಿ.ಎನ್. ಕೇಶವ್ ಹೇಳಿದರು.


ಕಾಲೇಜಿನಲ್ಲಿ ನಡೆದ ಭೌತಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ವತಿಯಿಂದ ಚಂದ್ರಯಾನ ಉತ್ಸವ ಹಾಗೂ ಮಿಷನ್ ಚಂದ್ರಯಾನ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ  ಪ್ರೊ.ಟಿ.ಎನ್.ಕೇಶವ್ ಚಂದ್ರಯಾನ 2ರ ವಿಫಲತೆ ಕಂಡು ಹಿಡಿದು ಗಣನೆಗೆ ತೆಗೆದುಕೊಂಡು ಚಂದ್ರಯಾನ 3ರಲ್ಲಿ ಇನ್ನಷ್ಟು ವಿನ್ಯಾಸ ಮಾಡಲಾಗಿದೆ.


ರಾಕೆಟ್ ಉಡಾವಣೆ ಮಾಡಲು ಶ್ರೀಹರಿಕೋಟವನ್ನು ಆಯ್ಕೆ ಮಾಡಿದರ ಕಾರಣವನ್ನು ತಿಳಿಸಿ, ರಾಕೆಟ್ ವೇಗ ಗನ್ ನಿಂದ ಹೊರಬರುವ ಬುಲ್ಲೆಟ್ ವೇಗಕ್ಕಿಂತ 5 ಪಟ್ಟು ಹೆಚ್ಚಿರುತ್ತದೆ. ಶುಕ್ರ ನಮ್ಮ ಹತ್ತಿರವಾದ ಗ್ರಹವಾಗಿದ್ದರೂ ಅಲ್ಲಿ ಉಷ್ಣತೆ ಹೆಚ್ಚಿರುವ ಕಾರಣ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ್ ಹೆಗ್ಡೆ ಮಾತನಾಡಿ, ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಅನ್ವೇಷಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಚಂದ್ರಯಾನ ಈ ದೆಸೆಯಲ್ಲಿ ಒಂದು. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಮತ್ತು ಕಾಲೇಜಿನ ಇಬ್ಬರು ಹಳೆಯ ವಿದ್ಯಾರ್ಥಿಗಳು ಇದರ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಎಂದು ತಿಳಿಸಿದರು.


ಈ ಕಾರ್ಯಕ್ರಮದ ಅಂಗವಾಗಿ ಸಾಕ್ಷ್ಯಚಿತ್ರ ಪ್ರದರ್ಶನ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಯೋಜಕೀಯಾದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಪೇಕ್ಷ ಜೈನ್, ವಿಭಾಗದ ಮುಖ್ಯಸ್ಥ ಪ್ರೊ. ಎನ್ ಕಾಕತ್ಕರ್ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಧಾನ್ ಸ್ವಾಗತಿಸಿ, ರೋಷನ್ ವಂದಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top