ಸಮಾಜದ ದೃಷ್ಟಿ ಕೋನ ಬದಲಿಸಲು ಸಾಧ್ಯವೆ...?

Upayuktha
1 minute read
0


ಸಮಾಜ- ನಾವೆಲ್ಲರೂ ಹೆದರುವ ಅಥವಾ ಹಿಂಜರಿಯುವ ಒಂದು ಸಂಗತಿ. ನಾವು ಸಮಾಜಕ್ಕೋಸ್ಕರ ಬದುಕುತ್ತಿದ್ದೇವೆಯೋ ಏನೋ ಅನ್ನೋ ಭಾವನೆ ನಮ್ಮ ಮನಸ್ಸಿಗೆ ಬರುತ್ತದೆ. ನಿಜ ಕೆಲವೊಂದು ಸಮಯ ಮತ್ತು ಸಂದರ್ಭ ನಮಗೆ ಈ ಭಾವನೆ ಮನಸ್ಸಿಗೆ ಬರೋ ಹಾಗೆ ಮಾಡುತ್ತದೆ. ಸಮಾಜದ ನೋಟ ಹೇಗಿದೆ ಅಂದರೆ ಒಳ್ಳೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬಹುದು ಎಂಬ ಯೋಚಿಸುತ್ತಿರುತ್ತದೆ. ಒಂದು ಹುಡುಗಿ ಮತ್ತು ಹುಡುಗ ಒಟ್ಟಿಗೆ ಮಾತನಾಡುತ್ತಿದ್ದರೆ ಅವರ ಮೇಲೆ ಇಲ್ಲ ಸಲ್ಲದ ಅಪವಾದವನ್ನು ಹೊರಿಸುತ್ತದೆ. ಒಂದು ಮಾತಿದೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು. ಅದರಂತೆ ಅವರು ಅಕ್ಕ ತಮ್ಮ ಅಥವಾ ಒಂದು ಒಳ್ಳೆ ಸ್ನೇಹಿತರಾಗಿರಬಹುದು ಅಲ್ಲವೇ? ಆದರೆ ನಿಜವೇನೆಂದು ತಿಳಿಯದೆ ಅವರ ಮೇಲೆ ಅನುಮಾನ ಪಡುತ್ತದೆ ಈ ಸಮಾಜ.


ಒಂದು ಹುಡುಗ ಹುಡುಗಿ ಪ್ರೀತಿಸುತ್ತಿದ್ದು ಆ ಹುಡುಗ ಅಥವಾ ಹುಡುಗಿಯ ಮನೆಯಲ್ಲಿ ಗೊತ್ತಾಗಿ ಯಾವುದಾದರೂ ಒಂದು ಕಾರಣಕ್ಕೆ ಅವರು ತಮ್ಮ ಪ್ರೀತಿಯನ್ನು ಬಿಟ್ಟುಕೊಡುತ್ತಾರೆ. ಯಾಕೆಂದರೆ ಅವರ ಅಪ್ಪ ಅಮ್ಮ ಈ ಸಮಾಜದಲ್ಲಿ ನನ್ನಿಂದಾಗಿ ತಲೆತಗ್ಗಿಸಬಾರದೆಂದು. ಹೀಗೆ ಹಲವಾರು ಘಟನೆಗಳು ನಡೆಯುತ್ತಿದೆ ಮತ್ತು ಸಮಾಜಕ್ಕೆ ಹೆದರಿ ತನ್ನ ಪ್ರಾಣವನ್ನು ಕಳೆದುಕೊಂಡವರು ತುಂಬಾ ಜನ ಇದ್ದಾರೆ. ನಾವು ಹೇಗೆ ಇದ್ದರೂ ಸಮಾಜ ನಮ್ಮನ್ನು ದೂಷಿಸುತ್ತದೆ. ನಾವು ಒಂದು ಒಳ್ಳೆ ಕೆಲಸ ಮಾಡಿದರೆ ಅದನ್ನು ಈ ಸಮಾಜ ಬಹಳ ಬೇಗನೆ ಮರೆತುಬಿಡುತ್ತದೆ. ಅದೇ ನಮ್ಮಿಂದ ಒಂದು ಸಣ್ಣ ತಪ್ಪಾದರೂ ಅದನ್ನು ನಾವು ಉಸಿರು ಇರುವವರೆಗೆ ನಮ್ಮನ್ನು ನಿಂದಿಸುತ್ತಿರುತ್ತದೆ. ಒಂದು ಮಾತು ಗೆಳೆಯರೇ. ನಾವೇ ಸಮಾಜ ನಮ್ಮಿಂದಲೆ  ಸಮಾಜ ಅಂತ ಗೊತ್ತಿದ್ದರೂ ನಮ್ಮ ಸಂತೋಷವನ್ನು ಬೇರೆ ಯಾರಿಗೋಸ್ಕರನೋ ಯಾಕೆ ಬಿಟ್ಟು ಕೊಡಬೇಕು. ಇಷ್ಟಕ್ಕೂ ನಾವು ಯಾಕೆ ಸಮಾಜಕ್ಕೆ ಹೆದರಬೇಕು; ಅದೇನೆ ಬಂದರೂ ಧೈರ್ಯದಿಂದ ಎದುರಿಸೋಣ. ಸಮಾಜ ಏನು ಅನ್ನುತ್ತದೆ ಅನ್ನೋ ಭಾವನೆಯನ್ನು ಮನಸ್ಸಿನಿಂದ ತೆಗೆದುಹಾಕಿ ನೋಡಿ. ಆಗಲೇ ನಾವು ಖುಷಿಯಾಗಿರಬಹುದು ಮತ್ತು ನಾವು ಈ ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯ.



- ಲಾವಣ್ಯ ನಾಗತೀರ್ಥ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top