ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜೀರ್ಣೋದ್ಧಾರಗೊಳ್ಳುತ್ತಿರುವ ಸುಲ್ಕೇರಿ ಬಸದಿಗೆ ಶನಿವಾರ ಭೇಟಿ ನೀಡಿದರು.
ಉಜಿರೆ: ಸುಲ್ಕೇರಿ ಗ್ರಾಮದಲ್ಲಿರುವ ಭಗವಾನ್ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಬಗ್ಯೆ ಮೆಚ್ಚುಗೆ ವ್ಯಕ್ತಪಡಿದರು.
ಧಾಮ ಸಂಪ್ರೋಕ್ಷಣೆ: ನೂತನ ಬಸದಿಯಲ್ಲಿ ಭಗವಾನ್ ನೇಮಿನಾಥ ಸ್ವಾಮಿಯ ಬಿಂಬ ಪ್ರತಿಷ್ಠಾಪನೆ ಹಾಗೂ ಧಾಮ ಸಂಪ್ರೋಕ್ಷಣಾ ಕಾರ್ಯಕ್ರಮವು ಇದೇ ಡಿಸೆಂಬರ್ 29, 30 ಮತ್ತು 31 ರಂದು ನಡೆಯಲಿದೆ ಎಂದು ಬಸದಿಯ ಆಡಳಿ ಸಮಿತಿಯವರು ತಿಳಿಸಿದ್ದಾರೆ.
ದಶಲಕ್ಷಣ ಪರ್ವ:
ಜೈನಧರ್ಮದ ಸಂಪ್ರದಾಯದಂತೆ ಪ್ರತಿವರ್ಷ ಭಾದ್ರಪದ ಪಂಚಮಿಯಿಂದ ಹುಣ್ಣಿಮೆ ವರೆಗೆ ದಶಲಕ್ಷಣ ಪರ್ವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಸೆ.20 ರಿಂದ 29ರ ವರೆಗೆ ಎಲ್ಲಾ ಜಿನಮಂದಿರ (ಬಸದಿ)ಗಳಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಜಪ, ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ದಶಲಕ್ಷಣ ಪರ್ವ ಆಚರಿಸುತ್ತಾರೆ.
ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ – ಇವು ದಶಧರ್ಮಗಳು.
ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಇದೇ 20 ರಿಂದ 29ರ ವರೆಗೆ ಪ್ರತಿದಿನ ಬೆಳಿಗ್ಯೆ ಏಳುಗಂಟೆಯಿಂದ ಮೂರೂ ಬಸದಿಗಳಲ್ಲಿ ಕ್ಷೀರಾಭಿಷೇಕ, ಅಷ್ಟವಿಧಾರ್ಚನಾ ಪೂಜೆ ಬಳಿಕ ದಶಧರ್ಮಗಳ ಚಿಂತನ-ಮಂಥನ ಮತ್ತು ಸ್ವಾಧ್ಯಾಯ ನಡೆಯಲಿದೆ ಎಂದು ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.
ಸೆ. 21 ರಂದು ಗುರುವಾರ ಹೊಂಬುಜ ಜೈನಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು ಇದೇ ಸಂದರ್ಭ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸ್ಮಾರಕ ವಿದ್ಯಾರ್ಥಿ ವೇತನ ವನ್ನೂ ವಿತರಿಸಲಾಗುವುದು.
ವೇಣೂರಿನಲ್ಲಿ ಬಾಹುಬಲಿ ಕ್ಷೇತ್ರದಲ್ಲಿ ಯಾತ್ರಿ ನಿವಾಸದಲ್ಲಿ ಸೆ. 20 ರಂದು ಬುಧವಾರ ಅಪರಾಹ್ನ 4 ಗಂಟೆಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ದಶಲಕ್ಷಣ ಪರ್ವ ಆಚರಣೆ ಉದ್ಘಾಟಿಸುವರು. ಬಳಿಕ ಹತ್ತು ದಿನಗಳಲ್ಲಿ ಪ್ರತಿದಿನ ವಿದ್ವಾಂಸರಿಂದ ಧಾರ್ಮಿಕ ಉಪನ್ಯಾಸ ಆಯೋಜಿಸಲಾಗಿದೆ.
ದಶಲಕ್ಷಣ ಪರ್ವದ ಕೊನೆಯ ದಿನ “ಕ್ಷಮಾವಳಿ” ಆಚರಿಸುತ್ತಾರೆ. ಪರಸ್ಪರ ಮನ, ವಚನ, ಕಾಯದಿಂದ ಯಾವುದೇ ತಪ್ಪು ಮಾಡಿದಲ್ಲಿ ಕ್ಷಮೆ ಯಾಚಿಸಿ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಸುವುದೆ ಕ್ಷಮಾವಳಿಯ ಉದ್ದೇಶವಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


