ಹಾಸನ: ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹಾಸನ ಜಿಲ್ಲಾ ಘಟಕ ವತಿಯಿಂದ ವರಮಹಾಲಕ್ಷ್ಮಿ ಹಬ್ಬ ಪ್ರಯುಕ್ತ ರಾಜ್ಯಮಟ್ಟದ ಭಕ್ತಿಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 60 ಕವಿಗಳು ಈ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಪ್ರ.ಸಾ.ಸಾ.ಅ. ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಕಾರ್ಯಕ್ರಮ ನಿರೂಪಿಸಿದರು.
ಗೊರೂರು ಅನಂತರಾಜು, ಹೆಚ್. ಎಸ್. ಮಂಜುನಾಥ್ (ಆರೋಗ್ಯ ಇಲಾಖೆ) ದೇವರಾಜು. ಹೆಚ್. ಪಿ. ಸಾಮಾಜಿಕ ಚಿಂತಕರು ಹಾಸನ, ಸುಂದರೇಶ್ ಡಿ ಉಡುವೇರೆ ಅವರು ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಮಾಲತಿ ಮೇಲ್ಕೋಟೆ, ಶ್ರೀಮತಿ ಸವಿತಾ ಯೋಗೇಶ್, ಶ್ರೀಮತಿ ಸಾವಿತ್ರಿ ಬಿ ಗೌಡ ಅವರು ಇದ್ದರು.
ಅನಿತಾ ಪ್ರಾಥಿ೯ಸಿದರು. ಮಮತಾ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ಶುಭ ಮಂಗಳ ಸತೀಶ್ ಹಂಚಿಕೊಂಡರು. ನಂತರ ನಡೆದ ಭಕ್ತಿ ಗೀತೆ ಸ್ಪರ್ಧೆಯಲ್ಲಿ 34 ಕವಿಗಳು ಭಾಗವಹಿಸಿದರು.
ವರಮಹಾಲಕ್ಷ್ಮೀ ಕುರಿತಾಗಿ ಸುಂದರ ಭಕ್ತಿ ಗೀತೆಗಳು ರಚಿಸಿ ಕೆಲವರು ವಾಚಿಸಿದರೆ ಕೆಲವರು ಹಾಡಿದರು. ಹೊ.ರಾ ಪರಮೇಶ್ ತೀರ್ಪುಗಾರರಾಗಿದ್ದರು. ಶ್ರೀಮತಿ ಮಾಳೇಟರ ಸೀತಮ್ಮ ವಿವೇಕ್ ಅಧ್ಯಕ್ಷತೆ ವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ