ಹಾಸನ: ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನದಿಂದ ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್ ರವರ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 9ನೇ ತಾರೀಖು ಸೀತಾರಾಮ ಆಂಜನೇಯ ದೇವಸ್ಥಾನದ ಪಕ್ಕದ ವಿವೇಕಾನಂದ ಶಾಲೆ ಹಾಸನ ಇಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕಿ ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಿಂದ 62 ಕವಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ನೀಲಮ್ಮ ಸುರೇಶ್ ಹಾಸನ, ಅಧ್ಯಕ್ಷತೆಯನ್ನು ಮಂಜುನಾಥ್ ಹೆಚ್. ಎಸ್. (ಆರೋಗ್ಯ ಇಲಾಖೆ) ಹಾಸನ ಅಪ್ಪುವಿನ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ದೇವರಾಜು ಎಚ್.ಪಿ (ಸಾಮಾಜಿಕ ಚಿಂತಕರು) ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ರಘು ಗೌಡ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾದ ಡಾ. ಬಾನಂ ಲೋಕೇಶ್, ಕೊಟ್ರೇಶ್ ಉಪ್ಪಾರ್, ಗೊರೂರು ಅನಂತರರಾಜು, ಸುಶೀಲ ಸೋಮಶೇಖರ್, ಸುಂದರೇಶ್ ಡಿ ಉಡುವಾರೆ, ಸುನೀತಾ ಹೆಚ್ ವಿ, ಹುಲ್ಲಳ್ಳಿ ಯೋಗಿಶ್, ಗೀತ ತಿಪ್ಪೇಸ್ವಾಮಿ, ಭಾರತಿ, ಶೇಖರ್, ಉದಯ್ ಕುಮಾರ್, ಡಾ. ಟಿ.ಎಂ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಸಾವಿತ್ರಿ ಬಿ ಗೌಡ, ಯಾಕೂಬ್ ಇನ್ನೂ ಹಲವಾರು ಗಣ್ಯರು ಭಾಗವಹಿಸಲಿದ್ದು, ಹಿರಿಯ ಕಿರಿಯ ಸಾಹಿತಿಗಳು, ಸಮಾಜ ಸೇವಕರು, ಅಪ್ಪು ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ, ಹಮ್ಮಿಕೊಳ್ಳಲಾಗಿದ್ದು, ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಆಸಕ್ತ ಕವಿಗಳು ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ