ಹಾಸನ: ಹಾಸನದಲ್ಲಿ ಮನೆ ಮನೆಗಳಲ್ಲಿ ನಿರಂತರವಾಗಿ ಕವಿಗೋಷ್ಠಿ ಸಾಹಿತ್ಯ ವಿಮರ್ಶೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 310ನೇ ತಿಂಗಳ ಸಾಹಿತ್ಯಕಾರ್ಯಕ್ರಮವನ್ನು ಶ್ರೀ ದ್ಯಾವಪ್ಪಗೌಡರು, 71/ಎ, ಕಿರಣಅರುಣ ನಿಲಯ, 3ನೇ ಮೈನ್, 3ನೇ ಕ್ರಾಸ್, ಹೇಮಾವತಿ ನಗರ, ಲಕ್ಷ್ಮಿನಾರಾಯಣಟೈಲ್ಸ್‍ಅಂಗಡಿಎದುರು, ಸಾಲಗಾಮೆ ರಸ್ತೆ ಪ್ರೆಸಿಡೆನ್ಸಿ ಕಾಲೇಜು ಹತ್ತಿರ ಇವರ ಪ್ರಾಯೋಜನೆಯಲ್ಲಿ ದಿನಾಂಕ 1-10-2023ರ ಭಾನುವಾರ ಇಳಿಹೊತ್ತು 3.30ಕ್ಕೆ ಏರ್ಪಡಿಸಲಾಗಿದೆ.
ಜಿಲ್ಲೆಯ ಹಿರಿಯ ಸಾಹಿತಿ ಶ್ರೀ ಹೊನ್ನಶೆಟ್ಟಿಹಳ್ಳಿ ಗಿರಿರಾಜ್‍ಅವರುಗಾಂಧಿ-ಒಂದು ಪಕ್ಷಿ ನೋಟ ವಿಷಯವಾಗಿ ವಿಶೇಷ ಉಪನ್ಯಾಸ ನೀಡುವರು. ಆಗಮಿತ ಕವಿಗಳಿಂದ ಕವಿಗೋಷ್ಠಿ ವಿಶೇಷವಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಕುರಿತಾಗಿ ಕವನ ವಾಚನ, ಗಾಯಕರಿಂದದೇಶಭಕ್ತಿಗೀತೆ ಪ್ರಸ್ತುತಿಗೆಅವಕಾಶವಿದೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು, ಕವಿಗಳು, ಗಾಯಕರು ಪ್ರೇಕ್ಷಕರುಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ