ಮಂಗಳೂರು: ರಾಧಾ ಸುರಭಿ ಗೋಸೇವಾ ಮಂದಿರ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಗೋರಥ ಯಾತ್ರೆಯು ಇಂದು (ಸೆ.30) ಸಂಜೆ ಗಂಟೆ 6.00ಕ್ಕೆ ನಗರಕ್ಕೆ ಪ್ರವೇಶ ಮಾಡಲಿದೆ. ಇದರ ಸ್ವಾಗತ ಕಾರ್ಯಕ್ರಮವನ್ನು ಚಿತ್ರಾಪುರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ ಗಂಟೆ 6.00 ರಿಂದ ಚಿತ್ರಾಪುರ ದ್ವಾರದಿಂದ ಕಲಶ ಹಿಡಿದ ತಾಯಂದಿರು, ಕುಣಿತ ಭಜನೆ, ಹಾಗೂ ಚಂಡೆ ವಾದನದೊಂದಿಗೆ ಶೋಭಾಯಾತ್ರೆ ಶ್ರೀ ಕ್ಷೇತ್ರಕ್ಕೆ ಸಾಗಿ ಅಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜೊತೆಗೂಡಿಕೊಂಡು ಯಶಸ್ವಿಗೊಳಿಸುವಂತೆ ಸಂಘಟಕರು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

