ಭಾದ್ರಪದ ಮಾಸದಲ್ಲಿ ಬರುವ ಗಣೇಶ, ಚೌತಿಯ ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಹಬ್ಬಗಳ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಹಬ್ಬವೂ ಒಂದಾಗಿದೆ. ಪ್ರಥಮ ಪೂಜೆ ಪಡೆಯುವ ಗಣೇಶ ಮೋದಕ ಪ್ರಿಯ, ಬಾಲ ಗಣೇಶ, ವಿಘ್ನ ವಿನಾಶಕ, ಏಕದಂತ, ಗಣಪತಿ, ಗಜಾನನ ಎಂದು ಪ್ರಖ್ಯಾತಿ ಪಡೆದಿರುವ ಗಣೇಶ ಎಲ್ಲರಿಗೂ ಅಚ್ಚುಮೆಚ್ಚು.
ಲೋಕಮಾನ್ಯ ಬಾಲ ಗಂಗಾಧರ ತಿಲಕರು ಭಾರತೀಯರೆಲ್ಲರನ್ನೂ ಒಟ್ಟುಗೂಡಿಸುವ ಸಲುವಾಗಿ ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡಿದರು ಇಂದಿಗೂ ಸಹ ಈ ಹಬ್ಬದ ದಿನ ಎಲ್ಲರೂ ದ್ವೇಷ, ಅಸೂಯೆ ಎಲ್ಲವನ್ನೂ ಮರೆತು, ಮೈಮರೆತು ಹಬ್ಬವನ್ನು ಸಡಗರದಿಂದ ಸಂಭ್ರಮಿಸಿ ಕುಣಿದು ಕುಪ್ಪಳಿಸುವರು.ಮೋದಕ ಪ್ರಿಯ ಬಾಲ ಗಣೇಶನಿಗೆ ವಿಶೇಷ ಪೂಜೆ, ತಿಂಡಿ ತಿನಿಸುಗಳನ್ನು ಮಾಡಿ ಕೆಲವು ಕಡೆ ಮೂರು ದಿನ, 9 ದಿನ, ಹಾಗೂ ಒಂದು ತಿಂಗಳವರೆಗೆ ಗಣೇಶನನ್ನು ಪೂಜಿಸಿ, ಊರೆಲ್ಲ ಮೆರವಣಿಗೆ ಮಾಡಿಸಿ ನಂತರ ವಿಘ್ನಗಳನ್ನು ನಿವಾರಿಸಿ ಎಲ್ಲರಿಗೂ ಒಳಿತು ಮಾಡೋ ಗಣನಾಯಕ ಎಂದು ಪ್ರಾಥಿಸಿ ಜಲಸ್ತಂಭ ಮಾಡಲಾಗುತ್ತದೆ.
ಗಣಪತಿ ಬಪ್ಪಾ ಮೋರಯಾ ಎಂದು ಕೂಗುವ ಧ್ವನಿಯ ಹಿಂದೆ ನಾವೆಲ್ಲರೂ ಒಂದೇ ಎಂಬ ಭಾವನೆಯೂ ಇದೆ. ಗಣೇಶ ಬುದ್ದಿವಂತಿಕೆ ಮಾತ್ರವಲ್ಲದೆ ತನ್ನ ದೇಹದ ಆಕಾರದಲ್ಲಿಯು ಮಾರ್ಗದರ್ಶಕ. ದೇಹದ ಆಕಾರ ಹೇಗಿದ್ದರೂ ಸಹ ನಮ್ಮ ಬುದ್ಧಿ, ವಿವೇಚನೆ, ಶಕ್ತಿ, ಆಲೋಚನೆ ನಮ್ಮ ಕಷ್ಟಗಳನ್ನು ಪರಿಹಾರ ಮಾಡುವ ಬುದ್ಧಿವಂತರಾಗಬೇಕು. ದೊಡ್ಡ ಕಣ್ಣು, ದೊಡ್ಡ ಕಿವಿ ಹೊಂದಿರುವ ಗಣೇಶನಿಗೆ ಚಿಕ್ಕ ಬಾಯಿ, ಜೊತೆಗೆ ದಂತಗಳು ಸಹ ಇದೆ. ಇದರ ಅರ್ಥ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ಮಾತು ಕಡಿಮೆ ಆಡಿ ಗಮನವಿಟ್ಟು ಆಲಿಸಿಕೊಳ್ಳಿ, ಶತ್ರುಗಳನ್ನು ಸೆದೆಬಡಿಯುವ ಆಯುಧ ನಿನ್ನಲ್ಲಿದ್ದರೂ ಸಹ ಬುದ್ದಿವಂತಿಕೆಯಿಂದ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಿ ಎಂದರ್ಥ.
ಭಾರತೀಯರ ಪಾಲಿಗೆ ಅಂದು ಇದು ಕೇವಲ ಹಬ್ಬವಲ್ಲ ಬದಲಾಗಿ ಜಾತಿ, ಬೇಧ, ವರ್ಣ, ದ್ವೇಷ ಇವೆಲ್ಲವನ್ನೂ ಮರೆತು ನಾವೆಲ್ಲರೂ ಒಂದೇ ಎಂದೂ ಲೋಕದ ಕಲ್ಯಾಣಕ್ಕಾಗಿ ಆಚರಿಸಿದ ಹಬ್ಬ ಇಂದಿಗೂ ಸಹ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿ ಹಬ್ಬದ ದಿನದಂದು ಗೌರಿ ಹಬ್ಬವೂ ಬಂದಿರುವುದು ವಿಶೇಷ.
- ಪ್ರಮೀಳ, ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ