ಗಣೇಶ ಚತುರ್ಥಿ- ವಿಘ್ನ ವಿನಾಶಕನಿಗೆ ಮೊದಲ ಪೂಜೆ

Upayuktha
0



ಹಬ್ಬದ ಆಚರಣೆ ಸಂಬಂಧವನ್ನು ಹೆಚ್ಚಿಸುವ ಮೂಲಕ ಆಪ್ತತೆಯನ್ನು ಉಳಿಸಿ ಬೆಳಸುತ್ತದೆ. ಅಂತಹ ಹಬ್ಬಗಳ ಪೈಕಿ ಗಣೇಶ ಚತುರ್ಥಿ ಪ್ರಮುಖವಾದುದು. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯನ್ನು ಗಣೇಶ ಚತುರ್ಥಿ ಎಂದು ಆಚರಿಸುತ್ತಾರೆ. ಯಾವುದೇ ಶುಭಕಾರ್ಯದ ಪ್ರಾರಂಭದಲ್ಲಿ ವಿಘ್ನ ನಿವಾರಕನಾದ ಗಣಪತಿಗೆ ಪ್ರಾರ್ಥನೆ ಸಲ್ಲಿಸುವುದು ರೂಢಿ‌.


ಗಣೇಶ ಚತುರ್ಥಿಯನ್ನು ಎರಡು ವಿಧದಲ್ಲಿ ಆಚರಿಸುತ್ತಾರೆ. ಗಣಪತಿಯ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು. ಇದು ಒಂದು ದಿನದಿಂದ ಹಲವು ದಿನಗಳ ವರೆಗೆ ಮುಂದುವರಿಯಬಹುದು. ಪೂಜಿಸಿದ ಮೂರ್ತಿಯನ್ನು ಕೊನೆಗೆ ವಿಸರ್ಜನ ಮೆರವಣಿಗೆಯಲ್ಲಿ ಸಾಗಿಸಿ ನಿಮಜ್ಜನ ಮಾಡುತ್ತಾರೆ. ಮಣ್ಣಿನ ಮೂರ್ತಿಯು ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ಇತ್ತೀಚೆಗೆ ಪರಿಸರ ಸ್ನೇಹಿ ಮೃಣ್ಮಯ ಮೂರ್ತಿಯ ಕಡೆಗೆ ಒಲವು ಹೆಚ್ಚಾಗುತ್ತಿದೆ.


ಇನ್ನೊಂದು ವಿಧ ಎಂದರೆ ಗಣಪತಿ ಹೋಮವನ್ನು ಮಾಡುವುದು. ಅಷ್ಟದ್ರವ್ಯವನ್ನು ತಯಾರಿಸಿ ಅದನ್ನು ಹೋಮಕ್ಕೆ ಅರ್ಪಿಸುವ ಮೂಲಕ ಗಣಪತಿಯನ್ನು ಪೂಜಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುವುದು. ಹೆಚ್ಚಾಗಿ ಮನೆಗಳಲ್ಲಿ ಈ ಕ್ರಮವನ್ನು ಅನುಸರಿಸುತ್ತಾರೆ.


ಬಾಲಗಂಗಾಧರ ತಿಲಕರು ಆರಂಭಿಸಿದ ಈ ಪದ್ಧತಿಯು ಈಗಲೂ ಮುಂದುವರಿಯುತ್ತಿರುವುದು ಶುಭದಾಯಕ. ಎಲ್ಲರಿಗೂ ಗಣಪತಿಯ ಅನುಗ್ರಹ ಪ್ರಾಪ್ತವಾಗಲಿ.


- ನರಸಿಂಹ ಭಟ್ ಕಟ್ಟದಮೂಲೆ

ಏತಡ್ಕ-ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top