ಬೆಳ್ತಂಗಡಿ ತಾಲೂಕು ಮಟ್ಟದ ಕಬಡ್ಡಿ: ನಡ ಕಾಲೇಜು ದ್ವಿತೀಯ

Upayuktha
0


ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿರುವ ಬೆಳ್ತಂಗಡಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವು ಸೆಪ್ಟೆಂಬರ್ 26ರಂದು ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ಎರಡೂ ತಂಡಗಳು ದ್ವಿತೀಯ ಸ್ಥಾನವನ್ನು ಗಳಿಸಿವೆ.


ಇದೇ ಸಂದರ್ಭದಲ್ಲಿ ನಿಕ್ಷಿತಾ 'ಬೆಸ್ಟ್ ರೈಡರ್' ಪ್ರಶಸ್ತಿಯನ್ನು ಹಾಗೂ ಮಹಮ್ಮದ್ ಮುಸ್ತಾಕ್ 'ಬೆಸ್ಟ್ ಕ್ಯಾಚರ್' ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇದೇ ಸಂದರ್ಭದಲ್ಲಿ ಚರಣ್ 'ಬೆಸ್ಟ್ ಆಲ್ ರೌಂಡರ್', ಲಾವಣ್ಯ 'ಬೆಸ್ಟ್ ರನ್ನರ್' ಅಕ್ಷಯ್ 'ಬೆಸ್ಟ್ ಚೇಸರ್' ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ, ಕ್ರೀಡಾ ಮಾರ್ಗದರ್ಶಿಯಾದ ವಸಂತಿ ಪಿ. ಇವರ ಮುಂದಾಳತ್ವದಲ್ಲಿ ಈ ಗೆಲುವು ಸಾಧ್ಯವಾಯಿತು.


إرسال تعليق

0 تعليقات
إرسال تعليق (0)
To Top