ಗೋಳ್ತಮಜಲು: ವಿಹಿಂಪ, ಬಜರಂಗದಳ ವತಿಯಿಂದ ಬೃಹತ್ ರಕ್ತದಾನ ಶಿಬಿರ

Upayuktha
0


ಕಲ್ಲಡ್ಕ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಳ್ತಮಜಲು ಖಂಡ ಸಮಿತಿ ವತಿಯಿಂದ ಕಾರ್ಯಕರ್ತರಾದ ದಿವಂಗತ ಯತಿರಾಜ್, ಜಗದೀಶ್, ಯತೀಶ್ ಕುಮಾರ್ ಇವರ ಸವಿನೆನಪಿಗಾಗಿ ಕೆಎಂಸಿ ಆಸ್ಪತ್ರೆ ಅತ್ತಾವರ ಹಾಗೂ ಶ್ರೀ ಗಣೇಶ ಮಂದಿರ ಗಣೇಶನಗರ ಗೋಳ್ತಮಜಲು ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಗಣೇಶನಗರದ ಗಣೇಶ ಮಂದಿರದ ವಠಾರದಲ್ಲಿ ಜರಗಿತು.


ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಉದ್ಘಾಟಿಸಿ, ಸಂಘಟನೆ ಕಾರ್ಯಕರ್ತರು ದೇಶಕ್ಕಾಗಿ ರಕ್ತ ಹರಿಸಲು ಹಾಗೂ ದೇಹಕ್ಕಾಗಿ ರಕ್ತ ನೀಡಲು ಸದಾ ಸಿದ್ಧರಿರುತ್ತಾರೆ. ಈ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸಿದರು.


ವೇದಿಕೆಯಲ್ಲಿ ಗಣೇಶ ಮಂದಿರದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಟೈಲರ್, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಉಪಾಧ್ಯಕ್ಷ  ಗಳಾದ ಗುರುರಾಜ ಬಂಟ್ವಾಳ ಮತ್ತು  ಕೃಷ್ಣಪ್ಪ ಕಲ್ಲಡ್ಕ, ವಿ ಹಿಂಪ ಕಲ್ಲಡ್ಕ ಘಟಕದ ಅಧ್ಯಕ್ಷರಾದ ಸಚಿನ್ ಮೆಲ್ಕಾರ್, ಸಂಚಾಲಕರದ ಸಂಪತ್ ಕಡೆಶಿವಾಲಯ, ಸುರಕ್ಷಾ ಪ್ರಮುಖರಾದ ಸಂತೋಷ್, ಭಾಜಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೋನಪ್ಪ ದೇವಸ್ಯ, ಗೋಳ್ತಮಜಲು ಪಂಚಾಯತ್ ಸದಸ್ಯರುಗಳಾದ ನಳಿನಿ ಡೊಂಬಯ್ಯ ಪೂಜಾರಿ, ಸುನಿಲ್ ಅಂಚನ್, ಕೆಎಂಸಿ ಆಸ್ಪತ್ರೆಯ  ಡಾ. ದಕ್ಷ ರೈ  ಉಪಸ್ಥಿತರಿದ್ದರು.


ಹಿಂದೂ ಯುವ ಮುಖಂಡ ಮಿಥುನ್ ಪೂಜಾರಿ ಹೊಸಮನೆ, ಮಹೇಶ್ ಅನಂತಾಡಿ, ಅಮಿತ್ ಕಲ್ಲಡ್ಕ, ತಿಲಕ್ ರಾಜ್ ಹೊಸೈಮಾರು, ದಿನೇಶ್ ಗೋಳ್ತಮಜಲು, ಗಂಗಾಧರ್ ಕೇಪುಳಕೋಡಿ, ಭಾಜಪ ಪ್ರಮುಖರಾದ ದಿನೇಶ್ ಅಮ್ಟೂರು, ಪ್ರಜ್ವಲ್ ಅಂಕದಡ್ಕ, ರಾಮಚಂದ್ರ ಸಾಲಿಯಾನ್ ಗಣೇಶ ಕೋಡಿ, ಮೋನಪ್ಪ ಜಿ, ಗಣೇಶ್ ಕೋಡಿ, ಶ್ರೀಮತಿ ನಳಿನಿ ಜಯರಾಮ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರವೀಶ್ ಆಚಾರ್ಯ ಗಣೇಶ್ ಕೋಡಿ ಸ್ವಾಗತಿಸಿ ವಂದಿಸಿದರು.


ಹಲವು ಕಾರ್ಯಕರ್ತರು ಹಾಗೂ ಮಹಿಳೆಯರು ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು, ಒಟ್ಟು ಸುಮಾರು 205 ಯುನಿಟ್ ರಕ್ತ ಸಂಗ್ರಹಿಸಲಾಯಿತು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top