ಆಳ್ವಾಸ್ ಕಾಲೇಜು ಎನ್‍ಎಸ್‍ಎಸ್ ಘಟಕ ಉದ್ಘಾಟನೆ

Upayuktha
0

ಮೂಡಬಿದಿರೆ: ಮಕ್ಕಳೆಂದರೆ ಪ್ರಶ್ನೆ, ಆಸಕ್ತಿ, ಕ್ರಿಯಾಶೀಲತೆ, ಚಟುವಟಿಕೆಯ ದ್ಯೋತಕ. ಆದುದರಿಂದ ವಿದ್ಯಾರ್ಥಿಗಳು ಯಾವಾಗಲೂ ಮಗುವಿನ ಮನಸ್ಥಿತಿಯನ್ನು ಉಳಿಸಿಕೊಳ್ಳಬೇಕು. ರಾಷ್ಟ್ರೀಯ ಸ್ವಯಂ ಸೇವಾ ವಿದ್ಯಾರ್ಥಿ ಮಾಡುವ ಎಲ್ಲಾ ಚಟುವಟಿಕೆಗಳು ರಾಷ್ಟ್ರೀಯತೆಯಿಂದ ಕೂಡಿರಬೇಕು  ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದರು.


ಆಳ್ವಾಸ್ ಕಾಲೇಜಿನ ಎನ್‍ಎಸ್‍ಎಸ್ ಘಟಕಗಳ 2023-24ರ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ  ಮಾತನಾಡಿದ ಅವರು, ಸೇವೆಯು ಶಾಶ್ವತವಾಗಿ ಸಂತೋಷ ನೀಡುತ್ತದೆ. ಆದುದರಿಂದ ವಿದ್ಯಾರ್ಥಿಗಳು ಕ್ಷಣಿಕ ಸಂತೋಷಕ್ಕೆ ಯತ್ನಿಸದೇ  ಸೇವೆಯ ಮೂಲಕ ಶಾಶ್ವತ ಸಂತೋಷಕ್ಕೆ ಪ್ರಯತ್ನಿಸಬೇಕೆಂದು ಕರೆ ನೀಡಿದರು. 


ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಎನ್‍ಎಸ್‍ಎಸ್ ಸಂಯೋಜನಾಧಿಕಾರಿಗಳಾದ ವಸಂತ್, ಅಕ್ಷತಾ ಪ್ರಭು, ಶ್ರೇಯಸ್ವಿ, ಅಪರ್ಣ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಆದಿತ್ಯ ನಾಯಕ್ ಸಹ ಕಾರ್ಯದರ್ಶಿ ಸಮೀಕ್ಷಾ,  ಯುನಿಟ್ ಲೀಡರ್‍ಗಳಾದ ಆದಿಶ್, ದಿಶಾ, ಸೂರಜ್, ವರ್ಷಿತಾ, ಅನನ್ಯಾ, ಸೃಜನ್, ಸನ್ವಿತ್ ಉಪಸ್ಥಿತರಿದ್ದರು.


ಶಶಾಂಕ್ ಪರಿಚಯ ಭಾಷಣ ಮಾಡಿದರು. ಸ್ವೀಕೃತ್ ಸ್ವಾಗತಿಸಿ, ಧೀರಜ್ ವಂದಿಸಿ, ಆದರ್ಶ್ ಕಾರ್ಯಕ್ರಮ ನಿರೂಪಿಸಿದರು. ಸನ್ವಿತ್ ಅತಿಥಿಗಳನ್ನು ಪರಿಚಯಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top