ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್-1 ಸೂರ್ಯಯಾನದ ಯಶಸ್ವೀ ಉಡ್ಡಯನದೊಂದಿಗೆ ಭಾರತವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದೆ. ಗುರಿಯನ್ನು ಸಾದಿಸಲಾಗಿದೆ ಎಂದು ಇಸ್ರೋ ಘೋಷಿಸಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗರಿಮೆಯನ್ನು ಸೂರ್ಯನೆತ್ತರಕ್ಕೆ ಒಯ್ದ ವಿಜ್ಞಾನಿಗಳನ್ನು ಅಭಿನಂದಿಸಿ ಸಂದೇಶ ನೀಡಿದರು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಬೆಳಗ್ಗೆ 11:50ಕ್ಕೆ ಪ್ರಾರಂಭವಾದ ಉಡ್ಡಯನವು 70 ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 1 ಗಂಟೆಗೆ ನಿಗದಿತ ಮಧ್ಯಂತರ ಕಕ್ಷೆಯನ್ನು ತಲುಪಿತು. ಉಪಗ್ರಹದ ಸೋಲಾರ್ ಪ್ಯಾನೆಲ್‌ಗಳು ತೆರೆದುಕೊಂಡಿದ್ದು, ಶಕ್ತಿಯ ಉತ್ಪಾದನೆ ಪ್ರಾರಂಭವಾಗಿದೆ. ಉಪಗ್ರಹಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಈ ಪ್ಯಾನೆಲ್‌ಗಳು ಒದಗಿಸುತ್ತಿದ್ದು, ಉಪಗ್ರಹದ ಮೊದಲ ಸಂಕೇತಗಳು ಇಸ್ರೋದ ಭೂ ನಿಯಂತ್ರಣ ಕೇಂದ್ರಕ್ಕೆ ತಲುಪಿವೆ. ಮುಂದಿನ ಹಂತದಲ್ಲಿ ಭೂಮಿಯ ಗುರುತ್ವಾಕರ್ಷ ಶಕ್ತಿಯನ್ನು ದಾಟಿ ಸೂರ್ಯನ ಕಕ್ಷೆಯತ್ತ ಕಳುಹಿಸುವ ಪ್ರಕ್ರಿಯೆಗಳು ನಡೆಯಲಿದ್ದು, 125 ದಿನಗಳ ಬಳಿಕ ಸೂರ್ಯನಿಂದ 15 ಲಕ್ಷ ಕಿ.ಮೀ ದೂರದ ಎಲ್-1 ಕಕ್ಷೆಯಲ್ಲಿ ಆದಿತ್ಯ ಎಲ್-1 ಸ್ಥಾಪನೆಗೊಳ್ಳಲಿದೆ.
ಆದಿತ್ಯ ಎಲ್1 ಮಿಷನ್ ಸೂರ್ಯನ ಮೇಲೆ ನಡೆಯವ ಜ್ವಾಲಾಮುಖಿಗಳ ಸ್ಫೋಟ, ಆಯಸ್ಕಾಂತೀಯ ಬಿರುಗಾಳಿ, ಸೂರ್ಯನಿಂದ ಹೊರಹೊಮ್ಮುವ ಬಗೆಬಗೆಯ ಕಿರಣಗಳಿಂದ ಉಪಗ್ರಹಗಳ ಮೇಲೆ ಆಗುವ ಪ್ರಭಾವ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಎಸ್ ಸೋಮನಾಥ ಅವರು ತಿಳಿಸಿದಂತೆ ಇಂದಿನಿಂದ 125 ಗಳ ಬಳಿಕ ಆದಿತ್ಯ ಎಲ್1 ಮಿಷನ್ ಅಂತರಿಕ್ಷದಲ್ಲಿ ತನ್ನ ನಿಗದಿತ ಸ್ಥಳ ತಲುಪಲಿದೆ.
ಆದಿತ್ಯ ಎಲ್-1: ಇಸ್ರೋ ಸೂರ್ಯ ಯಾನದ ಮುಖ್ಯಾಂಶಗಳು
* ಆದಿತ್ಯ-L1 ಉಡ್ಡಯನಕ್ಕೆ ಬಳಸಿದ ರಾಕೆಟ್- PSLV-C57
* ಚಂದ್ರಯಾನ 3 ಯಶಸ್ವೀ ಸಾಧನೆಯ ಬಳಿಕ ಇದೀಗ ಇಸ್ರೋದಿಂದ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್-1 ನೌಕೆಯ ಯಶಸ್ವೀ ಉಡ್ಡಯನ.
* ಭಾರತದ ಬಾಹ್ಯಾಕಾಶ ಸಾಧನೆಯ ಹಿರಿಮೆಗೆ ಮತ್ತೊಂದು ಗರಿ.
* ನಮ್ಮೆಲ್ಲರ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
* ಸೂರ್ಯನಿಂದ 18 ಲಕ್ಷ ಕಿ.ಮೀ ದೂರದಲ್ಲಿರುವ ಸೌರ ಮಾರುತಗಳ ಅಧ್ಯಯನ ನಡೆಸಲಿರುವ ಆದಿತ್ಯ ಎಲ್-1 ನೌಕೆ
* 125 ದಿನಗಳ ಬಳಿಕ ಎಲ್-1 ತಾಣ ತಲುಪಲಿರುವ ಆದಿತ್ಯ ನೌಕೆ
* ಆದಿತ್ಯ-L1 ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿ ಉಳಿಯುತ್ತದೆ, ಸೂರ್ಯನ ಕಡೆಗೆ ನಿರ್ದೇಶಿಸಲ್ಪಡುತ್ತದೆ, ಇದು ಭೂಮಿ-ಸೂರ್ಯನ ದೂರದ ಸುಮಾರು ಶೇ. 1ರಷ್ಟು ಆಗಿದೆ.
* ಸೂರ್ಯನು ಉರಿಯುವ ಅನಿಲದ ದೈತ್ಯ ಗೋಳ. ಆದಿತ್ಯ-L1 ಸೂರ್ಯನ ಹೊರಗಿನ ವಾತಾವರಣವನ್ನು 5 ವರ್ಷಗಳ ಕಾಲ ಅಧ್ಯಯನ ಮಾಡುತ್ತದೆ.
* ಆದಿತ್ಯ-L1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದಿಲ್ಲ.
* ಆದಿತ್ಯ ಎಲ್-1 ಉಡ್ಡಯನ ಮೊದಲ ಹಂತ ಯಶಸ್ವಿ. ಭೂಮಿಯ ಮೇಲ್ಭಾಗದ ನಿಗದಿತ ಕಕ್ಷೆಗೆ ಉಪಗ್ರಹ.
* ಮುಂದಿನ ಹಂತದಲ್ಲಿ ಸೂರ್ಯನ ನಿಗದಿತ ಕಕ್ಷೆ ಎಲ್ 1 ಪಾಯಿಂಟ್‌ನತ್ತ ಯಾನ.
* ಆದಿತ್ಯ ಎಲ್-1 ಯಶಸ್ವಿಯಾಗಿ ಮಧ್ಯಂತರ ಕಕ್ಷೆಗೆ. ರೆಕ್ಕೆ ಬಿಚ್ಚಿಕೊಂಡ ಉಪಗ್ರಹದ ಸೋಲಾರ್ ಪ್ಯಾನೆಲ್‌ಗಳು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ