AEIT - ವಿಟಿಯು ಬೆಸ್ಟ್ ಫಿಸಿಕ್ ಚಾಂಪಿಯನ್ಸ್, ವೇಟ್‍ಲಿಪ್ಟಿಂಗ್ ರನ್ನರ್ ಅಪ್ ಪ್ರಶಸ್ತಿ

Upayuktha
0

ಮಿಜಾರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಪುರುಷರ ಅತ್ಯುತ್ತಮ ದೇಹದಾಢ್ರ್ಯ ಚಾಂಪಿಯನ್‍ಶಿಪ್‍ನಲ್ಲಿ ಚಾಂಪಿಯನ್ ಆಗಿ ಹಾಗೂ ಭಾರ ಎತ್ತುವ ಸ್ಪರ್ಧೆಯ (ಪುರುಷರು) ರನ್ನರ್ ಅಪ್ ಪ್ರಶಸ್ತಿಯನ್ನು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮುಡಿಗೇರಿಸಿಕೊಂಡಿದೆ.  


ಬೆಂಗಳೂರಿನ ವೇಮನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಈಚೆಗೆ (ಸೆ.1ರಂದು) ನಡೆದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಗೆ ಮುತ್ತಿಕ್ಕಿತು. 


ಭರತ್ ‘ಬೆಸ್ಟ್ ಪೋಸರ್’ (ಅತ್ಯುತ್ತಮ ಭಂಗಿ) ಜೊತೆ ಚಿನ್ನದ ಪದಕ ಹಾಗೂ ದಿಲೀಪ್ ಪಿ.ಆರ್. ‘ಬೆಸ್ಟ್ ಮಸ್ಕ್ಯುಲರ್’ (ಅತ್ಯುತ್ತಮ ಸ್ನಾಯು) ಪ್ರಶಸ್ತಿ ಜೊತೆ ಚಿನ್ನದ ಪದಕ ಪಡೆದರು. ಎನ್.ವಿಕಾಸ್ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. 


ಭಾರ ಎತ್ತುವ ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ 2 ಕಂಚು ಪಡೆದ ಆಳ್ವಾಸ್ ತಂಡವು ಪುರುಷರ ರನ್ನರ್ ಅಫ್ ಪ್ರಶಸ್ತಿ ಪಡೆಯಿತು. 


ವಿಶಾಂತ್ (81 ಕೆ.ಜಿ. ವಿಭಾಗ), ಅಮರೇಶ್ ಎಂ. (55 ಕೆ.ಜಿ. ವಿಭಾಗ), ಹಾಗೂ ಬಿ. ಪ್ರಕಾಶ್ (67 ಕೆ.ಜಿ. ವಿಭಾಗ) ಚಿನ್ನದ ಪದಕ ಪಡೆದರೆ, ತಿಲಕ್ (62 ಕೆ.ಜಿ. ವಿಭಾಗ) ಹಾಗೂ ವಸಂತ (81 ಕೆ.ಜಿ. ವಿಭಾಗ) ಕಂಚಿನ ಪದಕ ಪಡೆದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿಲೀಪ್ ಶೆಟ್ಟಿ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ವಿಜೇತರನ್ನು ಅಭಿನಂದಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top