ಮಾತಿನಲ್ಲಿ ಸರಳತೆಯ ಶಿಕ್ಷಕ: ವಿದಾಯದ ಹೊತ್ತಿನಲ್ಲಿ ಗುರುವಿಗೊಂದು ನಮನ

Upayuktha
0


ಗುರು ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ತರುವಂತವರು ಹೇಳಿದರೆ ತಪ್ಪಾಗಲಾರದು. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಓದುವ ಸಂದರ್ಭದಲ್ಲಿ ಹಲವು ಶಿಕ್ಷಕರಿಂದ ವಿದ್ಯೆ ಕಲಿತು ಬಂದಿರುತ್ತೇವೆ. ನಾವು ಹೆಚ್ಚೆಂದರೆ ಮೊದಲು ಕಲಿಸಿದ ಗುರುವನ್ನು ಇಲ್ಲವೋ ನಮ್ಮೊಂದಿಗೆ ಹೆಚ್ಚಾಗಿ ಕಾಲ ಕಳೆದಿರುವ ಶಿಕ್ಷಕರನ್ನು ಇಷ್ಟ ಎನ್ನುವುದು ಅವರೊಂದಿಗೆ ಒಡನಾಟದಲ್ಲಿರುವುದು ಎಲ್ಲಾ ಸಾಮಾನ್ಯ ಇದೇ ರೀತಿ ಇದ್ದ ನನಗೆ ಪದವಿ ಶಿಕ್ಷಣಕ್ಕೆ ಬಂದಾಗ ಇಲ್ಲಿಯ ಶಿಕ್ಷಕರನ್ನು ಹೇಗೆ ಮಾತನಾಡಿಸುವುದು ಇವರೊಂದಿಗೆ ಹೇಗೆ ಕಾಲ ಕಳೆಯುವುದು ಎಂದೆಲ್ಲ ಚಿಂತನೆಯ ಹಾಕಿಕೊಂಡು ಹೆಜ್ಜೆ ಇಡುತ್ತೇನೆ. ಆ ಕ್ಷಣ ಸಿಕ್ಕಿದವರು ಎಂದರೆ ನನಗೆ ಎಚ್‌ ಜಿ ಶ್ರೀಧರ್ ಸರ್ ಇವರ ಮಾತಿನ ಸಹನೆಯೇ ಮನದಲ್ಲಿದ್ದ ಭಯ ದೂರವಾಗಲು ಕಾರಣವಾಗುತ್ತದೆ.


ಪ್ರತಿ ಕಾಲೇಜುಗಳಲ್ಲಿ ಮೊದಲ ಒಂದು ವಾರದಲ್ಲಿ ಪಠ್ಯೇತರವಾಗಿ ಮಾತನಾಡುವುದು ಸಹಜವಲ್ಲವೇ, ಹಾಗೆಯೇ ವಿವೇಕಾನಂದ ಮಹಾವಿದ್ಯಾಲಯದಲ್ಲೂ ಮಾಡಿದ್ದರು. ತದನಂತರದ ದಿನಗಳಲ್ಲಿ ಪಾಠ ಎಂದು ಕರೆದುಕೊಂಡು ಹೋಗುವಾಗ ವಿದ್ಯಾರ್ಥಿಗಳ ಮುಖವೆಲ್ಲ ಸಪ್ಪೆಯಾಗಿ ಹೋಗುತ್ತದೆ. ವಿದ್ಯಾರ್ಥಿಗಳ ಸ್ಪಂದನೆಗೆ ಬಾಗುವ ಶಿಕ್ಷಕನಾಗಿ ನನಗೆ ಕನ್ನಡ ಉಪನ್ಯಾಸಕನಾಗಿ ಬಂದ ಧೀರನೆಂದರೆ ತಪ್ಪಾಗಲಾರದು. ಬಂದು ಎಲ್ಲರೂ ಪಠ್ಯದ ವಿಷಯವೇ ತೆಗೆದರೆ ಇವರು ಮಾತ್ರ ನಮ್ಮ ಪರಿಚಯ ಹವ್ಯಾಸಗಳನ್ನು ಕೇಳುತ್ತ ಒಂದಷ್ಟು ಕಾಮಿಡಿಯ ಮಾಡುತ್ತ ನಿಧಾನವಾಗಿ ಪಾಠದ ವಿಷಯ ತೆಗೆಯುವ ಮುಗ್ಧ ಮನಸ್ಸಿನವರು ನಮ್ಮ ಶ್ರೀಧರ್ ಸರ್.


ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಒಡನಾಟ ಬೆಳೆಸಲು ಒಂದು ವರ್ಷ ಇಲ್ಲವೂ ಮೂರು ವರ್ಷಗಳು ಬೇಕಾಗುವುದು ಸಹಜ. ಆದರೆ ನಾನು ಮಾತ್ರ ಶ್ರೀಧರ್ ಸರ್‌ ಅವರೊಂದಿಗೆ ಕೇವಲ ಮೂರು ಗಂಟೆ ಅಂದರೆ ಮೂರು ದಿನದ ತರಗತಿಯಲ್ಲಿ ಬಹಳ ಹತ್ತಿರವಾದೆ. ಮೊದಲಿಗೆ ಪಠ್ಯದ ವಿಷಯ ತೆಗೆದಾಗ ಇವರೇನು ಹಿಂದಿನ ತರಹದ ಶಾಸನ ಎಂದೆಲ್ಲಾ ಮಾತನಾಡುತ್ತಾರೆ ಎಂದು ಅರ್ಧ ಅರ್ಧ ಕಣ್ಣು ಬಿಟ್ಟುಕೊಂಡು ತರಗತಿಯಲ್ಲಿ ಕುಳಿತ ನಾನು ಕೆಲವೇ ಹೊತ್ತಿನಲ್ಲಿ ತನ್ನಿಂತಾನಾಗಿ ನಿದ್ದೆ ಬಿಟ್ಟು ಪಾಠದತ್ತ ವಾಲಬೇಕಾದರೆ ಈ ಗುರುಗಳ ಪಾಠ ಹೇಗಿರಬಹುದು ಎಂದು ನೀವು ಯೋಚಿಸಿ. ಒಂದು ಬಾರಿ ಕೇಳಿದರೆ ಅಷ್ಟು ಬೇಗನೆ ಮರೆಯಲಂತೂ ಸಾಧ್ಯವಿಲ್ಲ ಅಷ್ಟು ಅರ್ಥಪೂರ್ಣ ವಾಗಿ ಬಹಳ ಉದಾಹರಣೆಯ ಚಿತ್ರಗಳನ್ನು ಮುಂದಿಟ್ಟುಕೊಂಡು ನಡೆಯುವವರು.


ಕೇವಲ ಒಂದು ತಿಂಗಳಿನಲ್ಲಿ ಮಾತ್ರ ಇವರ ಪಾಠ ನೀತಿ ಬೋಧನೆ ಕೇಳುವ ದೌರ್ಭಾಗ್ಯ ಎನ್ನಬಹುದು. ಯಾಕೆಂದರೆ ಆಗಸ್ಟ್ 3೦ರಂದು ಇವರು ವೃತ್ತಿಯಿಂದ ನಿವೃತ್ತಿಯಾಗುತ್ತಾರೆ. ನಿವೃತ್ತಿಯ ದಿನದಂದು ಹಿರಿಯ ವಿದ್ಯಾರ್ಥಿಗಳ, ಶಿಕ್ಷಕರ ಮನದಾಳದ ಮಾತುಗಳು ಇನ್ನು ನನಗೆ ಇವೆಲ್ಲ ಅನುಭವವಾಗಲು ಸಾಧ್ಯವಿಲ್ಲ ಎನಿಸುತ್ತದೆ. ಆದರೆ ಒಂದು ತಿಂಗಳಿನಲ್ಲಿ ಅವರು ನನ್ನಲ್ಲಿ ಏನೆಲ್ಲಾ ಬದಲಾವಣೆ ತಂದಿರುವುದರಲ್ಲಿ ಅಂತೂ ಅನುಮಾನವೇ ಇಲ್ಲ. ಉತ್ತಮ ಶಿಕ್ಷಕರಾಗಿ ಗೆಳೆಯರಾಗಿ ತಮಾಷೆಯಾಗಿ ಮಾತನಾಡುತ್ತಾ, ನನ್ನಲ್ಲಿ ಇನ್ನಷ್ಟು ಆಸಕ್ತಿ ಒಲವು ಹೆಚ್ಚಾಗಲು ಕಾರಣ ಹೂಡಿದವರೇ ಶ್ರೀಧರ್ ಸರ್. ಇವರು ನನ್ನೊಂದಿಗೆ ಕೇವಲ ಪದವಿ ಶಿಕ್ಷಣದ ಮೂರು ವರ್ಷ ಜೊತೆಗಿದ್ದಿದ್ದರೆ ನನ್ನಲ್ಲಿ ಇನ್ನಷ್ಟು ಬದಲಾವಣೆ ಆಗಿ ಏನೋ ಒಂದಷ್ಟು ಜನರಿಗೆ ಮಾದರಿಯಾಗುವಂತೆ ಮಾಡುತ್ತಿದ್ದರು ಎಂದು ಪ್ರಸ್ತಾಪಿಸಲು ಕಣ್ಣಲಿ, ಮನದಲ್ಲಿ ದುಃಖದ ಅಳಲು ಬರುತ್ತಿದ್ದರು ಅನಿವಾರ್ಯವಾಗಿದೆ. ಶ್ರೀಧರ್ ಸರ್ ನಿಮಗೆ ದೇವರು ಉತ್ತಮವಾದ ಆರೋಗ್ಯದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಲೇಖನಿಯಲ್ಲಿ ಬಹಳಷ್ಟು ಬರಹಗಳು ಮೂಡಿ ಬರಲಿ ಎನ್ನುವುದೇ ನಿಮ್ಮ ಪ್ರೀತಿಯ ವಿದ್ಯಾರ್ಥಿನಿಯ ಆಶಯ.

-ಅನನ್ಯ ಎಚ್ ಸುಬ್ರಹ್ಮಣ್ಯ

ಪ್ರಥಮ ವಿಭಾಗದ ಪತ್ರಿಕೋದ್ಯಮ ವಿದ್ಯಾರ್ಥಿನಿ.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top