ಸುದಾನದಲ್ಲಿ ಇಂಟ್ಯಾರಾಕ್ಟ್ ಕ್ಲಬ್ ಪದಗ್ರಹಣ ಮತ್ತು ಸೈನಿಕ ನಮನ ಕಾರ್ಯಕ್ರಮ

Upayuktha
0


ಪುತ್ತೂರು
: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜುಲೈ 28 ರಂದು ಶಾಲೆಯ ಇಂಟ್ಯಾರಾಕ್ಟ್ ಕ್ಲಬ್ “ಸ್ಪಂದನ” ದ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಿವೃತ್ತ ಸೈನಿಕರನ್ನು ಗೌರವಿಸುವ ಸೈನಿಕ ನಮನ ಕಾರ್ಯಕ್ರಮವು ನಡೆಯಿತು. ರೋಟರಿ ಎಲೈಟ್ ಪ್ರಾಯೋಜಕತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿಯಾದ ಸಾರ್ಜೆಂಟ್ ದಯಾನಂದ ಕೆ ಎಸ್ ರವರು ಮಾತನಾಡುತ್ತಾ, ಸೇನೆಗೆ ಸೇರ್ಪಡೆಗೊಳ್ಳಲು ಬೇಕಾದ ಅರ್ಹತೆ, ಅವಕಾಶ ಮತ್ತು ಅನುಕೂಲತೆಗಳ ಬಗೆಗೆ ಸವಿವಿವರವಾಗಿ ತಿಳಿಸಿದರು. 


ರೋಟರಿ ಎಲೈಟ್ ನ ರೊ.ಅಬ್ದುಲ್ ರಝಾಕ್ ಕಬಕಕರ್ಸ್ ರವರು ನೂತನವಾಗಿ ಆಯ್ಕೆಯಾದ ಸ್ಪಂದನ ಇಂಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ನಡೆಸಿಕೊಟ್ಟು ಮಾನವೀಯ ಸೇವೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಬಗ್ಗೆ ಉತ್ತಮ ಸಂದೇಶವನ್ನು ನೀಡಿದರು. 

ನೂತನ ಅಧ್ಯಕ್ಷೆಯಾಗಿ ಇಶಿತಾ ಎಸ್ ನಾಯರ್ (10ನೇ), ಕಾರ್ಯದರ್ಶಿಯಾಗಿ ನಿಕೋಲಸ್ ರೋನಿನ್ ಮಥಾಯಿಸ್ (9ನೇ) ಅಧಿಕಾರವನ್ನು ಸ್ವೀಕರಿಸಿದರು. 


ರೊ. ನರಸಿಂಹ ಪೈ, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ರೊ. ಆಸ್ಕರ್  ಆನಂದ್ ಶುಭಾಶಂಸನೆ ಗೈದರು. ಸಾನ್ವಿ ಜೆ. ಎಸ್. (10ನೇ) ನಮಿತ್ ಬಿ.ಆರ್ (10ನೇ) ಅಭ್ಯಾಗತರುಗಳನ್ನು ಪರಿಚಯಿಸಿದರು. 


ಈ ಸಂಧರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ 9ನೇ ತರಗತಿಯ ಗರಿಷ್ಟ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ರೋಟರಿ ಎಲೈಟ್ ನ ವತಿಯಿಂದ ಬಹುಮಾನ ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಉಪ ಮುಖ್ಯ ಶಿಕ್ಷಕಿ ಲವೀನಾ ಹನ್ಸ್ ಉಪಸ್ಥಿತರಿದ್ದರು. 


ಸಹಶಿಕ್ಷಕರಾದ  ವಿನಯ ರೈ, ಶ್ರೀಮತಿ. ಐರಿಸ್,  ಗ್ಲಾಡಿಸ್ ಸಹಕರಿಸಿದರು. ಇಂಟ್ಯಾರಾಕ್ಟ್ ಕ್ಲಬ್ ಸ್ಪಂದನದ ನಿಕಟ ಪೂರ್ವ ಅಧ್ಯಕ್ಷೆ ವಿಖ್ಯಾತಿ ಬೆಜ್ಜಂಗಳರವರು ಸ್ವಾಗತಿಸಿ, ಕಾರ್ಯದರ್ಶಿ ನಿಕೋಲಸ್ ರೋನಿನ್ ಮಥಾಯಿಸ್ ಧನ್ಯವಾದಗಳನ್ನರ್ಪಿಸಿದರು, ಪ್ರೀತಂ (10ನೇ), ಸಂಹಿತಾ (10ನೇ) ಕಾರ್ಯಕ್ರಮವನ್ನು ನಿರೂಪಿಸಿದರು. 

 

 ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top