ಮುಡಿಪು: ಸೂರಜ್‌ ಶಿಕ್ಷಣ ಸಂಸ್ಥೆಗಳಲ್ಲಿ ವಿಎಂಎಸ್‌ ಆ್ಯಪ್‌ ಅಳವಡಿಕೆ ಉದ್ಘಾಟನೆ

Upayuktha
0

ಮಕ್ಕಳ ಚಟುವಟಿಕೆಗಳ ಮೇಲೆ ಹೆತ್ತವರು ಇರುವಲ್ಲಿಂದಲೇ ನಿಗಾವಹಿಸಬಹುದು...!



ಮುಡಿಪು: ಸೂರಜ್ ಕಾಲೇಜು ಮತ್ತು ಜ್ಞಾನ ದೀಪ ಶಾಲೆ ಮುಡಿಪು ವತಿಯಿಂದ ಶಾಲೆಯಲ್ಲಿ ಮಕ್ಕಳ ಚಲನವಲನಗಳ ನಿಗಾವಹಿಸುವ ವಿ.ಎಮ್.ಎಸ್ ಆ್ಯಪ್‌ ಅಳವಡಿಕೆಯನ್ನು ವಿಧಾನ ಸಭಾ ಸಭಾಪತಿ ಯು.ಟಿ. ಖಾದರ್ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, ಮಂಜುನಾಥ್ ರೇವಣ್ಕರ್ ಅವರು ಸೂರಜ್ ಶಿಕ್ಷಣ ಸಂಸ್ಥೆಯ ಮೂಲಕ ಗ್ರಾಮೀಣ ಮಟ್ಟದ ಮಕ್ಕಳಿಗೆ ಅತ್ತ್ಯುತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇದು ಅವರ ದೇಶ ಪ್ರೇಮವಾಗಿದೆ. ಮಕ್ಕಳ ಹಿತದೃಷ್ಟಿಗಾಗಿ ಈ ಆ್ಯಪ್‌ನ್ನು ಅಳವಡಿಕೆ ಮಾಡಿದ್ದು ಶ್ಲಾಘನೀಯ, ಆದ್ದರಿಂದ ತಾವೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ದೇಶದ ಸಂಪತ್ತಾಗ ಬೇಕು, ಮಕ್ಕಳ ಚಲನವಲನಗಳು ವಿದ್ಯಾರ್ಥಿಗಳ ಹೆತ್ತವರಿಗೆ ದೊರಕಲು ಮತ್ತು ಮಕ್ಕಳ ವ್ಯಕ್ತಿತ್ವ ರೂಪಿಸಲು ಈ ಆ್ಯಪ್‌ ಸಹಕಾರಿಯಾಗಿದೆ, ಆದ್ದರಿಂದ ಮಂಜುನಾಥ್ ರೇವಣ್ಕರ್ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.


ಸೂರಜ್ ಶಿಕ್ಷಣ ಸಂಸ್ಥೆಯ ಚೇರ್‌ಮೆನ್ ಮಂಜುನಾಥ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮನೆಯಿಂದ ಹೊರಡಿ ಶಾಲೆಗೆ ಬರದ ಮಕ್ಕಳು ಸಮಾಜದಲ್ಲಿ ಬಹಳಷ್ಟಿದೆ, ಆದರೆ ಈ  ಆ್ಯಪ್‌ನಲ್ಲಿ ಸ್ಕ್ಯಾನ್ ಮಾಡಿದ ಕೂಡಲೇ ಮಕ್ಕಳ ಹೆತ್ತವರಿಗೆ ಮಕ್ಕಳ ಚಲನವಲನಗಳು ತಿಳಿಯುತ್ತದೆ. ಇದರಿಂದ ಪೋಷಕರಿಗೆ ಬಹಳ ಸಹಕಾರಿಯಾಗಲಿದೆ ಎಂದರು.


ವಿಎಮ್.ಎಸ್ ಆ್ಯಪ್‌ ಇದರ ಮೆನೇಜರ್ ರೂಪೇಶ್ ದೋಶಿ, ಸೂರಜ್ ಶಿಕ್ಷಣ ಸಂಸ್ಥೆಯ ಡೈರೆಕ್ಟರ್ ಡಾ. ಸೂರಜ್ ಎಸ್ ರೇವಣ್ಕರ್, ಪ್ರಾಂಶುಪಾಲರಾದ ಡಾಲ್ಫಿ ಸಿಕ್ವೇರಾ, ಉಪ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿ.ಎ.ಮ್.ಎಸ್  ಆ್ಯಪ್‌  ಮೆನೇಜರ್ ರೂಪೇಶ್ ದೋಶಿ ಅವರನ್ನು ಸನ್ಮಾನಿಸಲಾಯಿತು.


ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಶಿಕ್ಷಕಿ ಶ್ರೀಮತಿ ಶೋಬಿತ ವಿ.ಎಮ್.ಎಸ್ ಆ್ಯಪ್‌ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶ್ವೇತಾ ಮತ್ತು ಭವ್ಯ ಜ್ಯೋತಿ ಕಾರ್ಯಕ್ರಮ ನಿರೂಪಿದರು. ಉಪ ಪ್ರಾಂಶುಪಾಲ ರಕ್ಷಿತ್ ಕುಲಾಲ್ ಸ್ವಾಗತಿಸಿದರು. ಶಿಕ್ಷಕಿ ರೋಶನಿ ಯು.ಟಿ. ಖಾದರ್ ಅವರ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕಿ ಸವಿನಾ ಡಿಸೋಜ ವಂದಿಸಿದರು.


إرسال تعليق

0 تعليقات
إرسال تعليق (0)
To Top