ಹೊಸಂಗಡಿ: ಕೇರಳ ನಾಡ ಹಬ್ಬ ಓಣಂ ಅಂಗವಾಗಿ ಹೊಸಂಗಡಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಓಣಂ ಹಬ್ಬ ಆಚರಿಸಲಾಯಿತು. ಈ ವೇಳೆ ಸಂಸ್ಥೆಯ ಸಿಬ್ಬಂದಿಗಳು ಓಣಂ ಪೂಕಳಂ ಜತೆಗೆ ಇಸ್ರೋದ ಚಂದ್ರಯಾನ- 3 ಯ ಸವಿ ನೆನಪಿಗಾಗಿ ಹೂವಿನಲ್ಲಿ ರಾಕೆಟ್ ರಚಿಸಿದರು.
ಕಾರ್ಯಕ್ರಮವನ್ನು ಡಾ. ಮುರಳಿ ಮೋಹನ್ ಚೂಂತಾರು ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕೇರಳದ ನಾಡ ಹಬ್ಬ ಓಣಂ ರಾಜ್ಯಕ್ಕೆ ಸೇರಿದಂತೆ ಇಡೀ ದೇಶಕ್ಕೆ ಸುಭೀಕ್ಷೆಯನ್ನು ನೀಡಲಿ ಎಂದು ಹಾರೈಸಿದರು.
ಈ ವೇಳೆ ಸಂಸ್ಥೆಯ ಡಾ. ರಾಜಶ್ರೀ ಮೋಹನ್, ಡಾ. ಶರತ್ ಪಾರೆ ಸುಳ್ಯ, ಡಾ. ಟಾಮ್ ತಂಪಿ, ದಿವಾಕರ್, ದಂತ ಪರಿಚಾರಕಿಯರಾದ ರಮ್ಯ, ಚೈತ್ರ, ಸುಶ್ಮಿತಾ, ಜಯಶ್ರೀ ಕೋಟ್ಯಾನ್, ಮುಂತಾದವರು ಉಪಸ್ಥಿತರಿದ್ದರು. ಬಳಿಕ 15 ಬಗೆಯ ಕೇರಳದ ಭಕ್ಷ್ಯವನ್ನು ಒಳಗೊಂಡ ಓಣಂ ಸಧ್ಯ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ