ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಜಿಲ್ಲಾ ಸಮಿತಿ ಉಡುಪಿ, ದ.ಕ. ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ದಾನ ಹಾಗೂ ಜಿಲ್ಲಾ ಸಮ್ಮೇಳನ ಸಂಭ್ರಮ ಭಾನುವಾರ (ಆ.13) ಉಡುಪಿ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೂಲತಃ ಬಾರಕೂರಿನವರಾಗಿದ್ದು ಪುತ್ತೂರು ಬೊಳುವಾರು ನಿವಾಸಿಯಾಗಿರುವ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರ ಶಿಕ್ಷಣ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಗೌರವಿಸಲಾಯಿತು. ಪರಿಷತ್ತಿನ ಉಡುಪಿ ಘಟಕದ ಎನ್ ರಾಜು ಆಚಾರ್ಯ, ಸಮ್ಮೇಳನ ಸಭಾಧ್ಯಕ್ಷರಾದ ಪ್ರೊ.ಜಿ.ಯು. ನಾಯಕ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಎನ್ ರಾಜು ಆಚಾರ್ಯ ಉಡುಪಿ, ಕರಾವಳಿ ಕರ್ನಾಟಕ ವಿಭಾಗೀಯ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ರಟ್ಟೆಹಳ್ಳಿ ತಾಲೂಕು ಘಟಕ ಅಧ್ಯಕ್ಷ ಶೇಖರಗೌಡ ಪಾಟೀಲ, ಹಿರಿಯ ಕವಿ ಕು.ಗೋಪಾಲಭಟ್ಟರು, ಸಂಘಟಕ ಪತ್ರಕರ್ತ ಡಾ.ಶೇಖರ್ ಅಜೆಕಾರು, ಹಿರಿಯ ಚಿಂತಕ ವಿಶ್ವನಾಥ ಶೆಣೈ ಉಡುಪಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಶುಮಾಲಿ, ಕ.ಚು.ಸಾ.ಪ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ, ಗುರುರಾಜ್ ಎಂ.ಆರ್. ಕಾಸರಗೋಡು, ಡಾ.ವಾಣಿಶ್ರೀ ಕಾಸರಗೋಡು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ