ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮಂಗಳೂರು ವತಿಯಿಂದ 2 ದಿನಗಳ ನೃತ್ಯ ಸಮ್ಮೇಳನ

Upayuktha
0

ಡಿಸೆಂಬರ್ 24 ಮತ್ತು 25ರಂದು ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ



ಮಂಗಳೂರು: ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನೊಳಗೊಂಡ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ) ಮಂಗಳೂರು ಇದರ ವತಿಯಿಂದ ಇದೇ ಬರುವ ಡಿಸೆಂಬರ್ 24 ಮತ್ತು 25ರಂದು ಎರಡು ದಿನಗಳ ನೃತ್ಯೋತ್ಕರ್ಷ 2023 ಎಂಬ ಹೆಸರಿನಡಿ ನೃತ್ಯ ಸಮ್ಮೇಳನವನ್ನು ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ ಅಂಬಲಪಾಡಿಯಲ್ಲಿ ಆಯೋಜಿಸಲಾಗಿದೆ. ಧರ್ಮದರ್ಶಿ ಡಾ.ನಿ ಬೀ. ವಿಜಯ ಬಳ್ಳಾಲ್ ಇವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಡಾ. ಮೋಹನ ಆಳ್ವ, ಡಾ. ಹರಿಕೃಷ್ಣ ಪಾಣಾಜೆ ಡಾ. ಹರಿಕೃಷ್ಣ ಪುನರೂರು ಮೊದಲಾದವರ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನೃತ್ಯ ಗುರುಗಳ ಸಹಕಾರದೊಂದಿಗೆ ಕಾಸರಗೋಡಿನಿಂದ ಕಾರವಾರದ ವರೆಗಿನ ಎಲ್ಲಾ ನೃತ್ಯ ಗುರುಗಳನ್ನು ಸಂಘಟಿಸಿ ಆಯೋಜಿಸಲಾಗುವುದು.


ಈಗಾಗಲೇ ಮೊದಲ ಸುತ್ತಿನ ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ರೂಪುರೇಖೆಗಳನ್ನು ಸಿದ್ಧಪಡಿಸಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಆಯೋಜಿತವಾಗುವ ಈ ಸಮ್ಮೇಳನದಲ್ಲಿ ಕಲಾವಿದರುಗಳಿಗೆ, ಕಲಾಕ್ಷೇತ್ರದ ಬೆಳವಣಿಗೆಯ ಬಗ್ಗೆ ವಿಶೇಷ ಗೋಷ್ಠಿ, ಉಪನ್ಯಾಸ, ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಸುಧೀರ್ ಕೊಡವೂರು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top