ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರೋತ್ಸವದಲ್ಲಿ ಎಸ್‌ಡಿಎಂಗೆ ಪ್ರಥಮ ಸ್ಥಾನ

Upayuktha
0


ಉಜಿರೆ: ಬೆಂಗಳೂರಿನ ಗಾಯನ ಸಮಾಜ ಸಭಾಂಗಣದಲ್ಲಿ ಅವಾರ್ಡಿಯೊ ಇವೆಂಟ್ಸ್ ಮ್ಯಾನೇಜ್ಮೆಂಟ್ ಸಂಸ್ಥೆ ರವಿವಾರ ಆಯೋಜಿಸಿದ್ದ  ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವ ಸೀಸನ್ ಎರಡರಲ್ಲಿ ಎಸ್‌ಡಿಎಂ ಕಾಲೇಜು ಉಜಿರೆ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿಧ್ಯಾರ್ಥಿಗಳ ನಿರ್ಮಾಣದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನದ ಗರಿ ಪಡೆದುಕೊಂಡಿದೆ.


ಈ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರೋತ್ಸವ ಮತ್ತು ಕಿರುಚಿತ್ರೋತ್ಸದಲ್ಲಿ 150ಕ್ಕೂ ಹೆಚ್ಚು ತಂಡ ಬಾಗಿಯಾಗಿ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ನೊಂದಾಯಿಸಿಕೊಂಡಿದ್ದರು. ಇವುಗಳ ಪೈಕಿ ಉಜಿರೆಯ ಎಸ್,ಡಿ,ಎಮ್ ಕಾಲೇಜಿನ  ವಿಧ್ಯಾರ್ಥಿಗಳ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಅವಾರ್ಡಿಯೊ ಉತ್ತಮ ಸಾಕ್ಷ್ಯಚಿತ್ರ ನಿರ್ದೆಶನ ಎಂಬ ಅವಾರ್ಡಿನ ಜೊತೆಗೆ ಪ್ರಥಮ ಸ್ಥಾನವನ್ನು ನೀಡಲಾಯಿತು.


ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ನಿರ್ಮಾಣದ ಈ ಸಾಕ್ಷ್ಯಚಿತ್ರ ಪ್ರಸೀದ್ ಭಟ್ಟ ಸಾಹಿತ್ಯ ಮತ್ತು ನಿರ್ದೆಶನ, ಕಾರ್ತಿಕ್ ಹೆಗಡೆ ಛಾಯಾಗ್ರಹಣ ಹಾಗೂ ರಕ್ಷಿತ್ ರೈ ಸಂಕಲನವನ್ನ ಹೊಂದಿದೆ. ಶಿವ ಕುಮಾರ್ ಹಿನ್ನಲೆ ಧ್ವನಿ ಮತ್ತು ಸೋಮೆಶ್ವರ ಗುರುಮಠ ಉಪಶೀರ್ಷೀಕೆಯನ್ನು ನೀಡಿದ್ದಾರೆ. ಆಫ್ರಿಕಾ ಮೂಲದ ಸಿದ್ದಿ ಬುಡಕಟ್ಟು ಸಮುದಾಯದ ಸಂಸ್ಕೃತಿ ಮತ್ತು ಆಚರಣೆಗಳ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು ಅವರ ಬದುಕಿನಲ್ಲಿ ಹಾಸುಹೊಕ್ಕಿರುವ ಕಲಾ ಶ್ರೀಮಂತಿಕೆಯನ್ನ ಇದು ಕಟ್ಟುಕೊಟ್ಟಿದೆ. ಅಲ್ಪಪ್ರಮಾಣದಲ್ಲಿ ಇರುವ ಸಿದ್ದಿ ಜನಾಂಗದ ಮತ್ತು ಇಂದಿನ ಯುವ ಜನತೆಗೆ ಅವರ ಆಚರಣೆಯ ಪರಿಚಯವನ್ನ  ಮಾಡಿಕೊಡುವ ಈ ಸಾಕ್ಷ್ಯಚಿತ್ರ ‘ಸಿದ್ದಿ ಸಾಂಗತ್ಯ’ ಶೀರ್ಷೀಕೆಯಡಿಯಲ್ಲಿ ಮೂಡಿಬಂದಿದೆ.


ಭಾರತದಲ್ಲಿ ವಾಸವಾಗಿರುವ ಪ್ರತಿ ಸಮುದಾಯಗಳು ಅವರದೆ ಆದ ಸಂಸ್ಕೃತಿ ಮತ್ತು ಆಚರಣೆಯನ್ನು ಹೊಂದಿದೆ. ಆದರೆ ಇಂದಿನ ಆಧಿನಿಕತೆಯ ಪರಿಣಾಮದಿಂದಾಗಿ ಅವು ತಮ್ಮ ಮೂಲ ಸೊಗಡನ್ನು ಕಳೆದುಕೊಳ್ಳುತ್ತಿದೆ. ಅವುಗಳಲ್ಲಿ ಸಿದ್ದಿ ಜನಾಂಗ ಕೂಡಾ ಒಂದು. ಅವರಲ್ಲೆ ಕೆಲವರು ಅದನ್ನು ಕಾಪಾಡಿಕೊಂಡು ಹೋಗುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಅವರನ್ನ ಬೆಂಬಲಿಸುವ ಯುವ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಿ ಜಾಗೃತಿಮೂಡಿಸುವ ಪ್ರಯತ್ನವೇ ‘ಸಿದ್ದಿ ಸಾಂಗತ್ಯ’.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top