ಇಸ್ರೋ ವಿಜ್ಞಾನಿಗಳಿಗೆ ಶ್ರೀ ವ್ಯಾಸರಾಜ ಮಠದಿಂದ ಅಭಿನಂದನೆ

Chandrashekhara Kulamarva
0



ಬೆಂಗಳೂರು: ಜಾಗತಿಕ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಇಸ್ರೋದ ಚಂದ್ರಯಾನ 3 ಮೂಲಕ ಜಗತ್ತೇ ಭಾರತದತ್ತ ಆಶ್ಚರ್ಯದಿಂದ ನೋಡುವಂತೆ ಮಾಡಿದ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳಿಗೆ ಶ್ರೀ ಸೋಸಲೆ ವ್ಯಾಸರಾಜ ಮಠದ ಪ್ರಸ್ತುತ ಪಿಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರ ಏಳನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಬೆಂಗಳೂರಿನ ಗಾಂಧಿ ಬಜಾರ್ ನ ಬೆಣ್ಣೆ ಗೋವಿಂದಪ್ಪ ರಸ್ತೆಯ ಶ್ರೀ ವಿದ್ಯಾಪಯೋನಿಧಿ ಸಭಾಮಂದಿರದಲ್ಲಿ ಅಭಿನಂದನೆ ಯನ್ನು ಆಯೋಜಿಸಲಾಗಿತ್ತು.


ಹಿರಿಯ ವಿಜ್ಞಾನಿಗಳಾದ ಇಸ್ರೋ ನಿರ್ದೇಶಕ ಬಿ. ಎನ್ ರಾಮಕೃಷ್ಣ, ಬಿಎಸ್ ಕಿರಣ್, ಎಂ ಆರ್ ರಾಘವೇಂದ್ರ, ನಂದಿನಿ ಹರಿನಾಥ್, ಸುಧೀಂದ್ರ ಬಿಂಡಗಿ, ಮಧುಸೂದನ ವೈ ಎಲ್, ಶ್ರೀನಿಧಿ ಎಂಎಸ್, ಶ್ರೀಮತಿ ದ್ವಾರಕನಾಥ್, ಸುಕನ್ಯಾ ಮೂರ್ತಿ, ವೀಣಾ  ರಾಮಪ್ರಸಾದ್, ಜೈಲಕ್ಷ್ಮಿ ಚಂದ್ರಶೇಖರ್ ರವರುಗಳನ್ನು ಪೂಜ್ಯ ಶ್ರೀಪಾದರು ರಜತ ಫಲಕ, ಶಾಲು, ಅಭಿನಂದನಾ ಪತ್ರ ನೀಡಿ ಸತ್ಕರಿಸಿ ಮಾತನಾಡುತ್ತಾ ವಿಜ್ಞಾನಕ್ಕೂ ತತ್ವ ಜ್ಞಾನಕ್ಕೂ ನಿಕಟ ಸಂಬಂಧವಿದೆ ಅದನ್ನು ತಿಳಿಯಲು ಜ್ಞಾನಿಗಳಿಂದ ಮಾತ್ರ ಸಾಧ್ಯ ಎಂದು  ತಿಳಿಸಿದರು.


ಪ್ರೊ ಕೆ.ಜೆ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಹಿರಿಯ ಅಧಿಕಾರಿ ಕೆ. ಜಯರಾಜ್ ಮತ್ತು ಮುದ್ದು ಮೋಹನ್, ಹಿರಿಯ ಪತ್ರಕರ್ತ ಎಸ್.ಕೆ ಶೇಷ ಚಂದ್ರಿಕಾ, ನಿವೃತ್ತ ಎಜಿಡಿಪಿ ಭಾಸ್ಕರ ರಾವ್, ಕ್ಯಾಪ್ಟನ್ ರಾಜಾರಾವ್, ನ್ಯಾಯಮೂರ್ತಿ ಸುಧೀಂದ್ರರಾವ್, ಎಸ್ಪಿಬಿಸಿ ನಿರ್ದೇಶಕ ಡಿ.ಪಿ ಅನಂತ, ಮೈಸೂರಿನ ಪ್ರಾಚ್ಯ ಸಂಶೋಧನಾ ನಿರ್ದೇಶಕ ಡಿ.ಪಿ ಮಧುಸೂದನ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top