ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್‍ಗಾಗಿ ವಿವೇಕಾನಂದ ಪಿಯು ಕಾಲೇಜಿನಿಂದ ವಿಶೇಷ ಪ್ರಾರ್ಥನೆ

Chandrashekhara Kulamarva
0



ಪುತ್ತೂರು: ಭಾರತೀಯರ ಮಹಾ ನಿರೀಕ್ಷೆಯ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಯಾವುದೇ ಅಡೆ-ತಡೆ ಇಲ್ಲದೆ ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್‍ಗಾಗಿ ಈ ಸಂದರ್ಭದಲ್ಲಿ ಪ್ರಾರ್ಥನೆ ನಡೆಯಿತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಕಾರ್ಯದರ್ಶಿ ಎಂ. ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣೈ, ಸದಸ್ಯ ಡಾ. ಮುರಳೀಕೃಷ್ಣ ರೈ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಆಶೋಕ ಕುಂಬ್ಲೆ, ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್, ದೇವಿಚರಣ್ ರೈ, ತುಷಾರ, ಕಾರ್ಯಾಲಯ ಸಿಬ್ಬಂದಿ ನಾಗರಾಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.



ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಚಂದ್ರಯಾನ-3 ಯಶಸ್ವಿಯಾಗಲೆಂದು ವಿದ್ಯಾರ್ಥಿಗಳು ತಮ್ಮ ಸಹಿ ಹಾಕುವ ಮೂಲಕ ಶುಭ ಹಾರೈಸಿದರು.


Post a Comment

0 Comments
Post a Comment (0)
To Top