ಲಿಮ್ಕಾ ದಾಖಲೆಯತ್ತ 'ರಂಗಪಯಣ': ನಾಟಕದೊಳ್‌ ಕರ್ನಾಟಕ ಪರಿಕಲ್ಪನೆಯ ಪ್ರದರ್ಶನ

Upayuktha
0

ಏಕಕಾಲಕ್ಕೆ 31 ಜಿಲ್ಲೆ 31 ಕಲಾವಿದರಿಂದ 31 ರಂಗಮಂದಿರದಲ್ಲಿ ಪ್ರದರ್ಶನ


ಸುರತ್ಕಲ್‌:
ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ನಡೆಸುತ್ತಿರುವ ರಂಗಪಯಣ ತಂಡವು ಜುಲೈ 31 ರಂದು ಲಿಮ್ಕಾ ದಾಖಲೆಗಾಗಿ ನಾಟಕದೊಳ್ ಕರ್ನಾಟಕ ಪರಿಕಲ್ಪನೆಯಲ್ಲಿ 31 ಜಿಲ್ಲೆಯಲ್ಲಿ 31 ಕಲಾವಿದರು 31 ರಂಗಮಂದಿರದಲ್ಲಿ ಅಭಿನಯಿಸುವ 55 ನಿಮಿಷದ ಒಂದು ಪ್ರೇಮಕಥೆ ಏಕ ವ್ಯಕ್ತಿ ನಾಟಕ ಪ್ರದರ್ಶನವನ್ನು ಕರ್ನಾಟಕದಾದ್ಯಂತ ಏಕ ಸಮಯಕ್ಕೆ ಪ್ರದರ್ಶಿಸಿತು. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಸುರತ್ಕಲ್‍ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನಕೇಂದ್ರ, ಗೋವಿಂದದಾಸ ಪದವಿ ಪೂರ್ವಕಾಲೇಜಿನ ಲಲಿತ ಕಲಾ ಸಂಘ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಗೋವಿಂದದಾಸ ಪದವಿ ಪೂರ್ವಕಾಲೇಜಿನ ರಂಗಮಂಟಪದಲ್ಲಿ ಶಿವರಾಜು. ಎನ್. ನಾಟಕ ಪ್ರದರ್ಶಿಸಿದರು.


ನಯನ ಸೂಡ ಅವರ ನಿರ್ವಹಣೆಯಲ್ಲಿ ಕೇಂದ್ರ ಸಾಹಿತ್ಯಆಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಾಜ್‍ಗುರು ರಚನೆ ಸಂಗೀತ - ನಿರ್ದೇಶನ ನೀಡಿರುವ ಈ ನಾಟಕವು ಬೆಳ್ಳಿ ತೆರೆಯ ಮೇಲೆ ನಾಯಕನಾಗುವ ಕನಸು ಕಂಡ ನಟನೊಬ್ಬನ ಪ್ರೇಮಕಥೆಯನ್ನು ಅನಾವರಣಗೊಳಿಸುತ್ತದೆ.


ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್. ಮಾತನಾಡಿ ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಯುವ ಸಮುದಾಯವನ್ನು ತಲುಪುತ್ತಿರುವ ರಂಗಪಯಣದ ಕಾರ್ಯವನ್ನು ಶ್ಲಾಘಿಸಿದರು. ಹಿರಿಯರಂಗ ಹಾಗೂ ಚಲನಚಿತ್ರನಟಿ ಗೀತಾ ಸುರತ್ಕಲ್‍ ಅವರು ರಂಗಭೂಮಿಯ ಸಾಧ್ಯತೆಗಳನ್ನು ತೆರೆದಿಡುವ ಪ್ರಯೋಗ ಇದಾಗಿದೆಂದರು. ಹಿರಿಯ ನಿರ್ದೇಶಕ ಹಾಗೂ ನಿವೃತ್ತ ಶಿಕ್ಷಕ ಹೆಚ್.ಯು. ಅನಂತಯ್ಯ ಕಲಾವಿದರನ್ನು ಗೌರವಿಸಿದರು.


ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್.,ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಭಟ್‍ ಎಸ್.ಜಿ., ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು , ಎನ್.ಸಿ.ಸಿ ಅಧಿಕಾರಿ ಕ್ಯಾ. ಸುಧಾಯು., ಸಿಂಗಾರ ಸುರತ್ಕಲ್‍ನ ಅಧ್ಯಕ್ಷ ಪ್ರೊ.ದೇವಪ್ಪ ಕುಳಾಯಿ, ಜಾನಪದ ತಜ್ಞ ಕೆ.ಕೆ.ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.


ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋವಿಂದದಾಸ ಕಾಲೇಜು ಆಲ್ಯುಮ್‌ನ್‌ ಆಸೋಸಿಯೇಶನ್‍ನ ವಿನೊದ್ ಶೆಟ್ಟಿ ವಂದಿಸಿದರು. ಪ್ರಾಧ್ಯಾಪಕ ರಾಕೇಶ್ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top