ಗಂಗಾ ಮಾತೆಯ ದರ್ಶನ- ನಮನಗಳ ಬಳಿಕ ವಿಶ್ವಾಮಿತ್ರರು ರಾಮ ಲಕ್ಷ್ಮಣ ರೊಂದಿಗೆ ದಟ್ಟ ಭೀಕರವಾದ ಕಾಡನ್ನು ಪ್ರವೇಶಿಸಿದರು.ವಿಶ್ವಾಮಿತ್ರರನ್ನು ಅನುಸರಿಸಿ ರಾಮ;ರಾಮನನ್ನುಸರಿಸಿ ಲಕ್ಷ್ಮಣ ಹೀಗೆ ನಡೆಯುತ್ತಿರುವಾಗ ವಿಶ್ವಾಮಿತ್ರರು ಇದು ತಾಟಕಾವನ ಎಂದು ಹೇಳಿ ಅದರ ಹಿನ್ನೆಲೆಯನ್ನು ವಿವರಿಸಿದರು-
ತಾಟಕಿ ಒಬ್ಬಳು ಯಕ್ಷಕನ್ಯೆ.ಸುಂದನೆಂಬ ರಕ್ಕಸನ ಹೆಂಡತಿಯಾದಳು.ಇವರ ಮಗ ಮಾರೀಚ. ಅವರವರ ಕ್ರೂರ ಸ್ವಭಾವಗಳಿಗೆ ಅನುಗುಣವಾಗಿ ಇಲ್ಲಿನ ಋಷಿಗಳನ್ನು ಇನ್ನಿತರ ಜೀವಜಂತುಗಳನ್ನು ಹಿಂಸಿಸುತ್ತಾ ನಾಶಪಡಿಸುತ್ತಾ ಇದ್ದಾರೆ.ನಂದನವನದಂತಿದ್ದ ಈ ವನ ಇಂದು ಇವರಿಂದಾಗಿ ನರಕದಂತಿದೆ.ದುಷ್ಟಚಾರಿಣಿಯಾದ ತಾಟಕಿ ಇಲ್ಲೇ ಸ್ವಲ್ಪ ದೂರದಲ್ಲಿ ಅಡ್ಡಗಟ್ಟಿ ನಿಂತಿದ್ದಾಳೆ- ಎನ್ನುತ್ತಾ, ಅವಳನ್ನು ಸ್ತ್ರೀಯೆಂದು ನೋಡದೆ ವಧಿಸು ಎಂದು ರಾಮನಿಗೆ ಆದೇಶಿಸಿದರು.
ಹೀಗೆ ಹೇಳುತ್ತಿರುವಾಗಲೇ ಸಾವಿರ ಆನೆಗಳ ಬಲವುಳ್ಳ ವಿಕಾರ ರೂಪದ ತಾಟಕಿ ಕಂಡುಬಂದಳು.ರಾಮ ಲಕ್ಷ್ಮಣರ ಬಿಲ್ಲುಗಳ ಝೇಂಕಾರ ಕೇಳಿ ಕೋಪೋದ್ರಿಕ್ತಳಾದ ಅವಳು ಇವರ ಮೇಲೆ ಕಲ್ಲುಗಳ ಮಳೆಗರೆದಳು.ಮಾಯಾಯುದ್ಧವನ್ನು ಮಾಡಿದಳು.ವಿವಿಧ ರೂಪಗಳನ್ನು ತಾಳಿ ಭ್ರಮೆ ಹುಟ್ಟಿಸಿ ದಾಳಿ ಮಾಡಿದಳು.ಕೊನೆಕೊನೆಗೆ ರಾಮನ ಬಾಣದೇಟುಗಳನ್ನು ಸಹಿಸಲಾಗದೆ ಮಾಯಾಯುದ್ಧವನ್ನೇ ಮಾಡತೊಡಗಿದಳು.ಮೊದಮೊದಲು ರಾಮ ಸ್ತ್ರೀಯೆಂಬ ದಾಕ್ಷಿಣ್ಯದಿಂದ ದಾಳಿ ಮಾಡಲಿಲ್ಲ.ಆದರೆ ಕೊನೆಗೆ ಸಹಿಸಲಸಾಧ್ಯವಾದಾಗ ತಾನು ಕಲಿತ ಶಬ್ದವೇಧಿ ಬಾಣಪ್ರಯೋಗದ ಮೂಲಕ ಸಂಹರಿಸಿದನು.ವಿಶ್ವಾಮಿತ್ರರೂ ಸೇರಿದಂತೆ ಎಲ್ಲಾ ಮುನಿಗಳು ಮತ್ತು ದೇವತೆಗಳು ಹರ್ಷಿತರಾಗಿ ರಾಮ ಲಕ್ಷ್ಮಣರನ್ನು ಅಭಿನಂದಿಸಿದರು.ತಾಟಕಾವನ ಮತ್ತೆ ನಂದನವನದಂತಾಗ ತೊಡಗಿತು.
ರಾಮಬಾಣಕ್ಕೆ ಮೊದಲ ಬಲಿ ಸ್ತ್ರೀ- ದುಷ್ಟ ತಾಟಕಿ!
ಕಲ್ಲೆಸತದ ಮೂಲಕ ದಾಳಿಗೈಯುವುದು ಅಂದೂ ಇತ್ತು ಇಂದೂ ಇದೆ.ಇದು ದುಷ್ಟರ ಒಂದು ದಾಳಿ(ಕು)ತಂತ್ರ ಅಲ್ಲವೇ?
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ