ಒಡಹುಟ್ಟದಿದ್ದರೂ ಈತ ನನ್ನ ಅಣ್ಣ

Upayuktha
0


ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧಗಳಿಗೆ ಅದರದೇ ಆದ ಮಹತ್ವವಿದೆ. ಆ ಪವಿತ್ರ ಸಂಬಂಧಕ್ಕೆ ಬೆಲೆ ಕಟ್ಟಲು ಅಸಾಧ್ಯ. ಒಬ್ಬಳು ತಂಗಿಗೆ ಅವಳನ್ನು ಪ್ರೀತಿಯಿಂದ ಪೊರೆಯುವ, ಕಾಳಜಿ ಮಾಡುವ ಅಣ್ಣ ಎಲ್ಲರಿಗಿಂತಲು ಮೇಲು. ಅಣ್ಣ ತಂಗಿಯ ಸಂಬಂಧವೇ ಹಾಗೆ ,ಒಂದೇ ಮನೆಯಲ್ಲಿ ಹುಟ್ಟಿ, ಜತೆಜತೆಯಾಗಿ ಬಾಲ್ಯವನ್ನು ಕಳೆಯುತ್ತಾರೆ. ಪರಸ್ಪರ ಸಮಾನವಾದ ಕನಸುಗಳಿರುತ್ತವೆ. ಹಾಗಾಗಿ ಸಹೋದರಿ ಮದುವೆಯಾಗಿ ಹೋದ ನಂತರವೂ ಪರಸ್ಪರ ಕಾಳಜಿ, ಪ್ರೀತಿ ಜತೆಯಾಗುತ್ತವೆ. ವರ್ಷಗಳೇ ಉರುಳಿದರೂ ಮತ್ತೆ ಮತ್ತೆ ನೆನಪಾಗುವ, ಬದುಕಿನುದ್ದಕ್ಕೂ ಭರವಸೆಯಾಗಿ ನಿಲ್ಲುವ, ಅಪ್ಪನಂತೆ ಕಾಳಜಿ ಇಟ್ಟುಕೊಂಡಿರುವ, ಅಮ್ಮನಂತೆ ಪ್ರೀತಿ ತೋರುವ, ಗೆಳೆಯನಂತೆ ಕ್ಷಮಿಸುವ ಜೀವ ಅದು. ಅಣ್ಣ - ತಂಗಿ ನಡುವೆ ಇರುವ ಬಾಂಧವ್ಯವೇ ಅಂತಹದ್ದು.  ಅಣ್ಣತಂಗಿಯ ಪ್ರೀತಿಗೆ ಆದಿ ಮತ್ತು ಅಂತ್ಯವಿಲ್ಲ. 


ಹೀಗೆ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳಾದ ನನಗೆ ಅಣ್ಣನ ಪ್ರೀತಿಯ ಬಗ್ಗೆ ಅಷ್ಟು ಗೊತ್ತಿರಲಿಲ್ಲ.ಅಣ್ಣನ ಪ್ರೀತಿಯು ಹೇಗಿರುತ್ತದೆ ಎಂಬ ಊಹೆಯೂ ನನಗಿರಲಿಲ್ಲ.ನಮ್ಮ ಈ ಅಣ್ಣ ತಂಗಿಯ ಬಂಧನ ಪ್ರಾರಂಭವಾಗಿದ್ದು ನಾನು ಪ್ರೌಢಶಾಲೆಯಲ್ಲಿರುವಾಗ . ರಕ್ಷಾಬಂಧನ ದಿನದಂದು ಆಕಸ್ಮಿಕವಾಗಿ ಕಟ್ಟಿದ ರಾಖಿ  ಅಂದು ನನಗೊಂದು ಅಣ್ಣನನ್ನು ದೇವರು ಕಳುಹಿಸಿಕೊಟ್ಟಿದ್ದರು. ಅವನಿಗೂ ಒಡಹುಟ್ಟಿದ ತಂಗಿಯಿರಲಿಲ್ಲ . ನನಗೂ ಅಣ್ಣನಿರಲಿಲ್ಲ. ಈ ಮೂಲಕ ಅವನಿಗೊಂದು ತಂಗಿ ನನಗೊಂದು ಅಣ್ಣ, ಇಬ್ಬರಿಗೂ ಈ ಬಾಂಧವ್ಯ ಹೊಸದು. ಇಲ್ಲಿಂದ ನಮ್ಮ ಅಣ್ಣತಂಗಿಯ ಸಂಬಂಧ ಬೆಳೆಯಲು ಶುರುವಾಯಿತು.  ಅದರ ಮೊದಲು ಒಬ್ಬರ ಮುಖವನ್ನು ಒಬ್ಬರು ನೋಡಿರಲಿಲ್ಲ. ಮಾತನಾಡಿದ್ದಕ್ಕಿಂತ ಗಲಾಟೆಯೇ ಹೆಚ್ಚು ಮಾಡಿಕೊಂಡಿರಬಹುದು.ಅಂದರೆ ಹೈಸ್ಕೂಲ್ ಗೆ ಬಂದಾಗ ಹೊಸಮುಖ ಪರಿಚಯ ಆಗ ಹುಡುಗಿಯರನ್ನು ಕಂಡರೆ ಹುಡುಗರಿಗೆ ,ಹುಡುಗರನ್ನು ಕಂಡರೆ ಹುಡುಗಿಯರಿಗೆ ಆಗ್ತಿರಲಿಲ್ಲ. ಗಲಾಟೆಯೇ ನಡೆದದ್ದು ಹೆಚ್ಚು.ನಂತರ ಕ್ರಮೇಣ 9ನೇ ತರಗತಿಗೆ ಬಂದಾಗ ಎಲ್ಲವನ್ನು ಮರೆತು  ಎಲ್ಲರೊಂದಿಗೆ ಮಾತನಾಡಲಾರಂಭಿಸಿದೆವು. ಹೀಗೆ ಅಚಾನಕ್ ಆಗಿ ಕಟ್ಟಿದ ರಾಖಿಯಿಂದ ನಾನೊಂದು ಅಣ್ಣನನ್ನು ಪಡೆಯಲು ಸಾಧ್ಯವಾಯಿತು.ಅಣ್ಣ ಇಲ್ಲವೆಂಬ ಕೊರಗನ್ನು ನೀಗಿಸಿದವನು.ಸಂಬಂಧ ಗಟ್ಟಿಯಾಗುತ್ತಾ ಹೋದಹಾಗೆ ಬಾಂಧವ್ಯ ಹೆಚ್ಚು ಬೆಳೆಯುತ್ತಾ ಹೋಯಿತು.ನನಗೆ ಸ್ವಲ್ಪ ತೊಂದರೆಯಾದರೆ ಸಾಕು ಎದುರಿಗೆ ಯಾರೇ ಇರಲಿ ಜಗಳಕ್ಕೆ ನಿಂತವ.ತಂಗಿಗೋಸ್ಕರ ಏನೂ ಮಾಡಲು ಸಿದ್ಧವಿರುವವ.ನನಗೆ ಏನೇ ತೊಂದರೆಯಾದ್ದರೂ ನಿಮಿಷದಲ್ಲಿ ಪರಿಹರಿಸಿ ಕೊಡುವವನು.ನನ್ನ ಎಲ್ಲಾ ಕಷ್ಟಗಳಿಗೂ ಸ್ಪಂದಿಸುವವನು. ನನ್ನ ಎಲ್ಲಾ ಕಾರ್ಯಗಳಿಗೆ ಸದಾ ದೈರ್ಯ ತುಂಬುತ್ತಾ ಬೆನ್ನಹಿಂದೆ ನಿಂತು ಬೆನ್ನು ತಟ್ಟಿ ಪ್ರೊತ್ಸಾಹಿಸುತ್ತಾ ಇರುತ್ತಾನೆ .ನನ್ನ ಗೆಲುವಲ್ಲಿ ಖುಷಿಯನ್ನು ಕಂಡವನು.ಇವನು ನನ್ನ ಜೊತೆ ಒಡಹುಟ್ಟದಿದ್ದರೇನು ? ಒಂದೇ ಮನೆಯಲ್ಲಿ ಇಲ್ಲದಿದ್ದರೇನು ? ಜೊತೆಯಲ್ಲಿರಲಿದ್ದರೇನು? ಆ ಅಣ್ಣ ತಂಗಿಯ ಸಂಬಂಧ ಎಂದಿಗೂ  ಬದಲಾಗದು.ಹೀಗೆ ಅಂದು ದೊರಕಿದ ಆಣ್ಣ ಇಂದಿಗೂ ನನ್ನ ಜೊತೆಯಲ್ಲಿ ಇದ್ದಾನೆ ಮತ್ತು ಎಂದೆಂದಿಗೂ ಅವನೇ ನನ್ನ ಅಣ್ಣನಾಗಿ ಇರಬೇಕು.ಈ ಅಣ್ಣನ ಬಗ್ಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಒಂದೇ ರಕ್ತವನ್ನು ಹಂಚಿ ಹುಟ್ಟಿದರೆ ಮಾತ್ರ ಅಣ್ಣ ತಂಗಿಯಲ್ಲ ಅದು ನಮ್ಮ ಮನಸ್ಸಿನ ಭಾವನೆಯಲ್ಲಿ ಇರುವಂತಹದ್ದು,ಇವನು ನನ್ನ ಒಡಹುಟ್ಟಿದವನು ಅಲ್ಲ ,ಈತನು ಇನ್ನೊಂದು ತಾಯಿಯ ಮಗ ಆದರೆ ಈತ ನನ್ನ ಪ್ರೀತಿಯ ಅಣ್ಣ.....

ಎಲ್ಲಾ ನನ್ನ ಸಹೋದರರಿಗೆ ರಕ್ಷಾಬಂಧನದ ಹಾರ್ಧಿಕ ಶುಭಾಶಯಗಳು

                                                                                     


ಭವಿಷ್ಯಾ ಜೆ.ಕೆ. ಕುಡ್ತಾಜೆ

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ

ವಿವೇಕಾನಂದ ಕಾಲೇಜು (ಸ್ವಾಯತ್ತ),

ಪುತ್ತೂರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top