ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸಾಹಿತ್ಯ ರಚನೆ ಕಾರ್ಯಾಗಾರ

Upayuktha
0


ಪುತ್ತೂರು:
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಿನಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮೂರನೇ ಕಾರ್ಯಕ್ರಮ ನಡೆಯಿತು.


ಮೆದುಳಿಗೆ ನಾವು ಕೊಡುವ ಸಂದೇಶ ಹಾಗೂ ಆಲೋಚನೆಯ ಮೇಲೆ ಮೆದುಳಿನ ಸಾಮರ್ಥ್ಯ ನಿಂತಿದೆ, ಒಳಗಿರುವ ಕಸವನ್ನು ಹೊರಗೆ ಹಾಕಿ ಗುರಿಯ ಊಹೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಯಾಗಾರದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಅಪೂರ್ವ ಕಾರಂತ್ ಅಭಿವ್ಯಕ್ತಿಸಿದರು.


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಿನಲ್ಲಿ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸಾಹಿತ್ಯ ರಚನೆ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾರ್ಯಾಗಾರದಲ್ಲಿ 5,6,7, 8ನೇ ತರಗತಿಯ ಒಟ್ಟು 124 ಮಕ್ಕಳು ಭಾಗವಹಿಸಿದ್ದರು. 


ಸಕಾರಾತ್ಮಕ ಊಹೆಯನ್ನು ಮಾಡಿಕೊಳ್ಳುವ ಉಪಯೋಗ, ಕ್ರಿಸ್ಟಲ್ ಬಾಲ್ ಪವರ್ ಟೆಕ್ನಿಕ್, ಓದಿನ ವಿಧಾನ, ಪರೀಕ್ಷಾ ಭಯ ಹೋಗಲಾಡಿಸುವಿಕೆ, ಸ್ಮರಣ ಶಕ್ತಿ ವಿಷಯಗಳ ಕುರಿತು ಮಾತನಾಡಿ ಅನೇಕ ಪ್ರಶ್ನೆಗಳ ಮೂಲಕ ಕಾರ್ಯಾಗಾರದಲ್ಲಿ ಮಕ್ಕಳನ್ನು ತೊಡಗಿಸಿದರು.


ಸಾಹಿತ್ಯ ರಚನೆಯ ಮಹತ್ವ ತಿಳಿಸುತ್ತಾ ಎಲ್ಲರಲ್ಲೂ ಆ ಕೂಡಲೇ ಚುಟುಕು ರಚಿಸಲು ಪ್ರೇರೇಪಿಸಿದ್ರು. 18 ಮಕ್ಕಳ ಬಹಳ ಚೆನ್ನಾಗಿ ಚುಟುಕು ರಚಿಸಿದ್ದಾರೆ ಎಂದು ಅಪೂರ್ವ ಕಾರಂತ್ ಮೆಚ್ಚುಗೆ ವ್ಯಕ್ತಪಡಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top