ನಮ್ಮ ಬೆಳಕೇ ಕನ್ನಡ
ನಮ್ಮಉಸಿರೇ ಕನ್ನಡ
ಕನ್ನಡದ ಕಹಳೆ ಎಲ್ಲೆಡೆ ಮೊಳಗಲಿ
ತಾಯಿ ಕನ್ನಡಾಂಬೆಗೆ ಜಯವಾಗಲಿ
ಹಲವು ಭಾಷೆ ನಮ್ಮಲ್ಲಿದೆ
ಕನ್ನಡ ಭಾಷೆ ಹೃದಯದಲ್ಲಿದೆ
ಶಿಲ್ಪ ಕಲೆಗಳ ಬೀಡು ನಮ್ಮದು
ಶ್ರೇಷ್ಠ ಕವಿಗಳ ಪುಣ್ಯ ನೆಲವು ನಮ್ಮದು
ಎದೆ ತಟ್ಟಿ ಹೇಳುವೆ ನಾ ಭಾರತೀಯನೆಂದು
ಗರ್ವದಿಂದ ಬಾಳುವೆ ನಾ ಕನ್ನಡಿಗನೆಂದು
ಕನ್ನಡವನ್ನು ಉಳಿಸೋಣ
ಕನ್ನಡವನ್ನು ಬೆಳೆಸೋಣ
ಎಲ್ಲೇ ಇರಲಿ ಹೇಗೇ ಇರಲಿ
ಕನ್ನಡ ನಮ್ಮದಾಗಿರಲಿ
ಕನ್ನಡ ನುಡಿ ಉಸಿರಾಗಿರಲಿ
ಕನ್ನಡ ಅಕ್ಷರ ಬಳಸೋಣ
ಕನ್ನಡ ಸಾಹಿತ್ಯ ಓದೋಣ
ಕರುನಾಡ ಭಾಷೆ ಬೆಳೆಸೋಣ
ಕನ್ನಡಾಂಬೆಗೆ ನಮಿಸೋಣ
ಕೃಷ್ಣ ತುಂಗಾ ಭದ್ರ ಕಾವೇರಿಯ ನೀರಿನಂತೆ
ಕನ್ನಡಾಂಬೆಯ ಕೀರ್ತಿ ಎಲ್ಲೆಡೆ ಪಸರಿಸಲಿ
ಕನ್ನಡ ಭಾಷೆಯ ಮಳೆಸುರಿಯಲಿ
ಕನ್ನಡದ ಕಂಪು ಎಲ್ಲೆಡೆ ಹರಡಲಿ.
ಕುಮಾರಿ ಪ್ರಣತಿ. ಎನ್
6ನೇ ತರಗತಿ.
ಎಂಎಸ್‌ಸಿಎಚ್‌ಎಸ್ ಪೆರಡಾಲ ನೀರ್ಚಾಲ್
ಕಾಸರಗೋಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ