ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಜೈವಿಕ ತಂತ್ರಜ್ಞಾನ (ಬಯೋ ಟೆಕ್ನಾಲಜಿ) ವಿಭಾಗದ ಉಡುಪಿ ಜಿಲ್ಲಾ ಜೈವಿಕ ಇಂಧನ ಕೇಂದ್ರ, ಕರ್ನಾಟಕ ಸರಕಾರದ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್ ಬಿಡಿಬಿ) ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ)ಗಳ ಸಹಯೋಗದಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆಯನ್ನು ಆಗಸ್ಟ್ 10ರಂದು ಆಚರಿಸಲಾಯಿತು.
ಜೈವಿಕ ಇಂಧನ ಆಧಾರಿತ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಿಟ್ಟೆ ಕಾಲೇಜಿನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜೈವಿಕ ಇಂಧನಕ್ಕೆ ಸಾರ್ವಕಾಲಿಕ ಮನ್ನಣೆ ಇದೆ, ಸುಸ್ತಿರ ಅರ್ಥಿಕತೆಯ ಮೂಲಕ ಜೈವಿಕ ಇಂಧನ ಉತ್ಪತ್ತಿ ಮಾಡಬೇಕೆಂದು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಯು.ಟಿ. ವಿಜಯ್, ಕಾರ್ಯನಿರ್ವಾಹಕ ಕಾರ್ಯದರ್ಶಿ (ಕೆಎಸ್ ಸಿಎಸ್ ಟಿ) ಮತ್ತು ಡಾ. ಜಿ.ಎನ್. ದಯಾನಂದ, ವ್ಯವಸ್ಥಾಪಕರು (ಕೆ.ಎಸ್.ಬಿ.ಡಿ.ಬಿ) ಭಾಗವಹಿಸಿ ಜೈವಿಕ ಇಂಧನದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಬಯೋ ಟೆಕ್ನಾಲಜಿ ವಿಭಾಗದ ಹಳೆ ವಿದ್ಯಾರ್ಥಿ, ಬ್ರಹ್ಮಾವರ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಣವ್ ಶೆಟ್ಟಿಯವರು ತಮ್ಮ ವಾಹನಗಳಲ್ಲಿ ಜೈವಿಕ ಇಂಧನ ಬಳಕೆಯ ಹಿತಾನುಭವವನ್ನು ವರ್ಣಿಸಿದರು.
ಬಯೋ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥೆ ಡಾ. ಉಜ್ವಲ್ ಪಿ. ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಪೂಜಾರಿ ವಂದಿಸಿದರು. ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ದ್ವಿತೀಯ ವರ್ಷದ ವಿದ್ಯಾರ್ಥಿನಿ ಶಿವಪ್ರಿಯ ಕಾರ್ಯಕ್ರಮ ನಿರೂಪಿಸಿದರು. ವಿ
ಭಾಗದ ವಿದ್ಯಾರ್ಥಿಗಳು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ವಾಹನಗಳಲ್ಲಿ ಜೈವಿಕ ಇಂಧನ ಬಳಕೆ ಹಾಗು ಜೈವಿಕ ಇಂಧನ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ