ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ 2023-24ರ ಮೊದಲ ಪ್ರತಿಭಾ ಭಾರತೀ ಕಾರ್ಯಕ್ರಮ ಜುಲೈ 31ರಂದು ಜರುಗಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಚೆಕ್ಕಣಿಕೆ ಶ್ರೀಯುತ ಪರಮೇಶ್ವರ ಹೆಬ್ಬಾರರು ಮಾತನಾಡುತ್ತಾ ಸಂಸ್ಕಾರಯುತ ಮಕ್ಕಳೇ ಈ ವಿದ್ಯಾಪೀಠದ ವಿಶೇಷ ಪ್ರತಿಭೆಗಳು ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕುದುರೆಪ್ಪಾಡಿ ಬಾಲಸುಬ್ರಹ್ಮಣ್ಯ ಭಟ್ ಮಕ್ಕಳಿಂದಲೇ ಮಕ್ಕಳಿಗಾಗಿ ಮಾಡಿಸುವ ಈ ಕಾರ್ಯಕ್ರಮವು ಬಹಳ ಮೆಚ್ಚುಗೆಯಾಯ್ತು ಎಂದರು.
ಹತ್ತನೆ ತರಗತಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಹತ್ತನೆ ತರಗತಿ ಕುಶನ್ ಸ್ವಾಗತಿಸಿದನು.
ಎಲ್.ಕೆ.ಜಿ ಮಕ್ಕಳಿಂದ ತೊಡಗಿ ಹತ್ತನೆ ತರಗತಿ ವರೆಗಿನ ಎಲ್ಲಾ ಮಕ್ಕಳಿಂದ ವಿವಿಧ ಚಟುವಟಿಕೆಗಳು ನೆರವೇರಿದುವು. ಹತ್ತನೆ ತರಗತಿ ಬಾಲಕ ತೇಜಸ್ಸು ಸಭಾ ಅಧ್ಯಕ್ಷನಾಗಿದ್ದು ಮಾತನಾಡಿ ಸಂತೋಷ ವ್ಯಕ್ತಪಡಿಸಿದನು. ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಸಹ ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ: ವಿಜಯಾಸುಬ್ರಹ್ಮಣ್ಯ,
ವಿದ್ಯಾಪೀಠದ ಗ್ರಂಥ ಪಾಲಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ