ಮೂಡುಬಿದಿರೆ: ಮಣ್ಣಿನ ಆರೋಗ್ಯ ಕಾಪಾಡಲು ರೈತರಿಗೆ ಸಲಹೆ

Upayuktha
0

ಮೂಡುಬಿದಿರೆ: ಶೇಕಡಾ 95ಕ್ಕಿಂತ ಹೆಚ್ಚಿನ ಆಹಾರ ಪದಾರ್ಥಗಳೆಲ್ಲವನ್ನು ಮಣ್ಣಿನಲ್ಲಿಯೇ ಬೆಳೆಸಬೇಕಾಗಿರುವುದರಿಂದ ಅದು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡೇ ಬೆಳೆಯನ್ನು ನೀಡುತ್ತದೆ. ಸತ್ವಯುತವಾದ, ಆರೋಗ್ಯದ ಮೇಲೆ ವ್ತತಿರಿಕ್ತ ಪರಿಣಾಮ ಬೀರದ ಉತ್ಪನ್ನಗಳನ್ನು ಮತ್ತು ಉತ್ತಮ ಇಳುವರಿಯನ್ನು ನಾವು ಪಡೆಯಬೇಕಾಗಿದ್ದರೆ ಎಲ್ಲದಕ್ಕೂ ಮೂಲವಾದ ಮಣ್ಣಿನ ಮಹತ್ವವನ್ನು ಅರಿತುಕೊಂಡು ಮಣ್ಣಿನ ಆರೋಗ್ಯವನ್ನು ಸದಾ ಕಾಲ ಕಾಪಾಡಿಕೊಂಡು ಬರಬೇಕಾಗಿದೆ ಎಂಬುದಾಗಿ ಮಂಗಳೂರಿನ ಕೃಷಿ ವಿಜ್ಞಾನ  ಕೇಂದ್ರದ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ್  ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.


ದಿ.19ರ ಶನಿವಾರದಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಕೃಷಿ ವಿಚಾರ ವಿನಿಮಯ ಕೇಂದ, ಮೂಡುಬಿದಿರೆ ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯಲ್ಲಿ ನಡೆದ ‘ಮಣ್ಣಿನ ಆರೋಗ್ಯ ಮತ್ತು ಭತ್ತ ಬೇಸಾಯ ಕ್ರಮಗಳು’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಣ್ಣಿನ ಆರೋಗ್ಯದ ಬಗ್ಗೆ ಮಾತನಾಡಿದರು.


ಇನ್ನೋರ್ವ ಕೃಷಿ ವಿಜ್ಞಾನಿ ಡಾ. ಹರೀಶ್ ಶೆಣೈಯವರು ಭತ್ತದ ಬೇಸಾಯ ಕ್ರಮದ ಬಗ್ಗೆ ಮಾತನಾಡಿ ನಮ್ಮ ಜಿಲ್ಲೆಗೆ ಸೂಕ್ತವಾದ ಭತ್ತದ ತಳಿಗಳು, ಅವುಗಳ ಸಂರಕ್ಷಣೆ, ಭತ್ತದ ಬೇಸಾಯ ಕ್ರಮಗಳ ಬಗ್ಗೆ ಮಾತನಾಡಿ ರೈತರಿಗೆ ಸಬ್ಸಿಡಿ ದರದಲ್ಲಿ ಸಿಗುವ ಯೂರಿಯಾವನ್ನು ಮನಬಂದಂತೆ ಬಳಸದೆ ವಿವೇಚನೆಯಿಂದ ಬಳಸುವಂತೆ ಕರೆ ನೀಡಿದರು.


ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ, ಸಾಹಿತಿ ಕೆ.ಎನ್.ಭಟ್. ಶಿರಾಡಿಪಾಲ್ ಅವರ ಶತಮಾನೋತ್ಸವ ವರ್ಷದ ನಿಮಿತ್ತವಾಗಿ ಹಮ್ಮಿಕೊಂಡಿರುವ ಶತನಮನ - ಶತಸನ್ಮಾನ ಸರಣಿ ಕಾರ್ಯಕ್ರಮದಲ್ಲಿ ತಮ್ಮ ಐದು ಎಕ್ರೆ ಗದ್ದೆಯಲ್ಲಿ ನಿರಂತರವಾಗಿ ಭತ್ತದ ಕೃಷಿಯನ್ನು ಮಾಡುತ್ತಿರುವ ದಿನೇಶ ಆನಡ್ಕ ಅವರನ್ನು ಸನ್ಮಾನಿಸಲಾಯಿತು.


ಮೂಡುಬಿದಿರೆಯ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸನ್ಮಾನವನ್ನು ನೆರವೇರಿಸಿದರು. ಶ್ರೀ ಗುಣಪಾಲ ಮುದ್ಯ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಚೌಟರ ಅರಮನೆಯ ಕುಲದೀಪ್ ಎಂ, ಪ್ರತಾಪ್ ಕುಮಾರ್, ಜಯರಾಜ ಕಂಬಳಿ, ಬಿ. ಅಭಯ ಕುಮಾರ್, ಧನಕೀರ್ತಿ ಬಲಿಪ, ಸುಭಾಶ್ಚಂದ್ರ ಚೌಟ,  ವಕೀಲರಾದ ಶ್ವೇತಾ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಲೋಕೇಶ್ ಪಿ.ಎಂ, ಶ್ರೀಮತಿ ಮೆಲ್ವಿನ್ ಮಿರಾಂದ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ವಿವಿಧ ತರಕಾರಿ ಬೀಜಗಳ ಪೊಟ್ಟಣ ಹಾಗೂ ಒಂದು ಹಣ್ಣಿನ ಗಿಡವನ್ನು ಉಚಿತವಾಗಿ ವಿತರಿಸಲಾಯಿತು.


ರಾಜವರ್ಮ ಬೈಲಂಗಡಿಯವರು ಸ್ವಾಗತಿಸಿದರು. ಕೆ.ಎನ್.ಭಟ್. ಶಿರಾಡಿ ಪಾಲ್ ಶತನಮನ-ಶತಸನ್ಮಾನ ಸಮಿತಿಯ ಕೃಷ್ಣ ಕುಮಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


- ಸದಾನಂದ ನಾರಾವಿ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top