ಸೈನ್ಯ ಸೇರಲು ತಿಳುವಳಿಕೆ, ಪ್ರೋತ್ಸಾಹದ ಅಗತ್ಯವಿದೆ: ಪಿಒ ಸುಧೀರ್ ಪೈ

Upayuktha
0

ಮಂಗಳೂರು: ಭಾರತೀಯ ಸೈನ್ಯದ ಬಗ್ಗೆ ತಿಳುವಳಿಕೆ ಮತ್ತು ಪ್ರೋತ್ಸಾಹದ ಕೊರತೆಯಿಂದ ಕರಾವಳಿ ಜಿಲ್ಲೆಗಳಿಂದ ಸೇನೆ ಸೇರುವವರ ಸಂಖ್ಯೆ ಕಡಿಮೆಯಿದೆ, ಎಂದು ಭಾರತೀಯ ನೌಕಾಸೇನೆಯ ಪಿಒ ಸುಧೀರ್ ಪೈ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತೀಯ ಸೈನ್ಯಾಧಿಕಾರಿಗಳು ಆಕರ್ಷಕ ವೇತನ ಪಡೆಯುತ್ತಾರೆ. ಅಗ್ನಿಪತ್ನಂ ತಹ ಹೊಸ ಯೋಜನೆಗಳಿವೆ. 2020 ರ ಬಳಿಕ‌ ಮಹಿಳೆಯರಿಗೂ ಸೈನ್ಯದಲ್ಲಿ ಅಪಾರ ಅವಕಾಶಗಳಿವೆ, ಎಂದರು.


ಜನಸಂಖ್ಯೆ, ವೈವಿಧ್ಯತೆ ನಮ್ಮ ದೇಶದ ಆಸ್ತಿ. ಯುವಜನತೆ ನಮ್ಮ ಭವಿಷ್ಯ. ಉತ್ಪಾದನಾ ಯೋಜನೆ ಹಾಗೂ ಎಲ್ಲರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಭಾರತ ಸೂಪರ್ ಪವರ್ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನ ಎನ್.ಸಿ.ಸಿ ಘಟಕಗಳ ಕಾರ್ಯಚಟುವಟಿಕೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ದೇಶ ವಿಭಜನೆಯ ಕರಾಳ ನೆನಪುಗಳನ್ನು ಬಿಚ್ಚಿಡುವ ವಸ್ತುಪ್ರದರ್ಶನವನ್ನು ಉದ್ಘಾಟಿಸಲಾಯಿತು.ಮೇರಿ ಮತಿ ಮೇರಾ ದೇಶ್ & ಸಂದೇಶದಡಿ ದೇಶ ರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.


ಎನ್‌.ಸಿ.ಸಿ ನೌಕಾದಳದ ಅಧಿಕಾರಿ ಡಾ. ಯತೀಶ್‌ ಕುಮಾರ್‌ ಅತಿಥಿಗಳನ್ನು ಸ್ವಾಗತಿಸಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ ಧನ್ಯವಾದ ಸಮರ್ಪಿಸಿದರು. ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ ಎಂ ಕಾರ್ಯಕ್ರಮ ನಿರೂಪಿಸಿದರು. ಎನ್‌.ಸಿ.ಸಿ ಭೂಸೇನೆ ವಿಭಾಗದ ಡಾ. ಜಯರಾಜ್‌ ಎನ್‌, ಎನ್‌.ಎಸ್‌ಎಸ್‌ನ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸುರೇಶ್‌, ಡಾ. ಗಾಯತ್ರಿ ಎನ್‌ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top