ಮಂಗಳೂರು: ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶುರೆನ್ಸ್ ಗ್ರಾಹಕರ ಅನನ್ಯ ಅಗತ್ಯಗಳನ್ನು ಪೂರೈಸುವ ನವೀನ ಮತ್ತು ವಿಶೇಷ ಅಗತ್ಯತೆಗೆ ಅನುಗುಣವಾದ ಆರೋಗ್ಯ ಪರಿಹಾರ ಟಾಟಾ ಎಐಎ ಪ್ರೊ-ಫಿಟ್ ಅನ್ನು ಪ್ರಾರಂಭಿಸಿದೆ.
ಈ ಅಸಾಧಾರಣ ಯೋಜನೆಯು ಗ್ರಾಹಕರ ವೈದ್ಯಕೀಯ ವೆಚ್ಚಗಳು ಹಾಗೂ ಆರೋಗ್ಯ ಮತ್ತು ಕ್ಷೇಮ ಪ್ರಯೋಜನಗಳಿಗೆ ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ ಮತ್ತು ಸಂಪತ್ತು ಸೃಷ್ಟಿಗೆ ಅವಕಾಶವನ್ನು ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೇ ಇದು ಆರೋಗ್ಯ ತುರ್ತು ನಿಧಿಯಾಗಿ ದ್ವಿಗುಣಗೊಳ್ಳುತ್ತದೆ ಎಂದು ಟಾಟಾ ಎಐಎ ಲೈಫ್ ಇನ್ಶೂರೆನ್ಸ್‍ನ ಅಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ ಸಮಿತ್ ಉಪಾಧ್ಯಾಯ ಪ್ರಕಟಣೆಯಲ್ಲಿ ಹೇಳಿದ್ದಾರೆ.
2021 ರ ಭಾರತೀಯ ಆರ್ಥಿಕ ಸಮೀಕ್ಷೆಯ ಪ್ರಕಾರ, ವೈದ್ಯಕೀಯ ವೆಚ್ಚದ 65% ರಷ್ಟು ಹಣವನ್ನು ನಮ್ಮ ಕೈಯಿಂದಲೇ ಸ್ವಂತವಾಗಿ ಖರ್ಚು ಮಾಡುವ ಶುಲ್ಕವಾಗಿ ಶುಲ್ಕವಾಗಿ ಪಾವತಿಸಲಾಗುತ್ತದೆ. ಈ ವೆಚ್ಚವನ್ನು ಕನಿಷ್ಠಗೊಳಿಸುವುದು ಪಾಲಿಸಿಯ ಉದ್ದೇಶ.
130 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು, ಡೇಕೇರ್ ವಿಧಿವಿಧಾನಗಳು ಪಟ್ಟಿಯಲ್ಲಿದ್ದು, 57 ಗಂಭೀರ ಕಾಯಿಲೆಗಳಿಗೆ ಸುರಕ್ಷೆ ಒದಗಿಸುತ್ತದೆ. ಭಾರತದಲ್ಲಿನ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಕ್ಲೇಮ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ರೂ.25,000 ವರೆಗಿನ ರೋಗನಿರ್ಣಯ ಪರೀಕ್ಷೆಗಳಿಗೆ ಮರುಪಾವತಿ, ಚಿಕಿತ್ಸೆ- ಸಂಬಂಧಿತ, ತೃತೀಯ ಲಿಂಗಿ ಜನರಿಗೆ 'ಹೆಮ್ಮೆ' ರಿಯಾಯಿತಿ ವೆಚ್ಚಗಳಿಗಾಗಿ ತೆರಿಗೆ-ಮುಕ್ತ ಸೌಲಭ್ಯ ಹಾಗೂ ಮಹಿಳೆಯರು ಮತ್ತು ಯುವಜನತೆ ತಮ್ಮ ಆರೋಗ್ಯದ ಕಡೆಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸುವ ವಿಶಿಷ್ಟ ಪ್ರಯೋಜನಗಳು ಇವೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ